ಕ್ಷಿಪಣಿ ದಾಳಿಯೊಂದರಲ್ಲಿ ಸರ್ಕಾರದ ಪರ ಕಾರ್ಯನಿರ್ವಹಿಸುತ್ತಿದ್ದ 26 ಬಾಡಿಗೆ ಯೋಧರು ಹತ:

ಭೆರುತ್, ಮೇ 1-ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸೆಯಿಂದ ಜರ್ಜರಿತವಾದ ಉತ್ತರ ಸಿರಿಯಾದಲ್ಲಿ ನಡೆದ ಕ್ಷಿಪಣಿ ದಾಳಿಯೊಂದರಲ್ಲಿ ಸರ್ಕಾರದ ಪರ ಕಾರ್ಯನಿರ್ವಹಿಸುತ್ತಿದ್ದ 26 ಬಾಡಿಗೆ ಯೋಧರು ಹತರಾಗಿ, ಅನೇಕರು ಗಾಯಗೊಂಡಿದ್ದಾರೆ.
ಮೃತಪಟ್ಟಿವರಲ್ಲಿ ಹೆಚ್ಚಿನವರು ಇರಾನ್ ಮೂಲದವರು ಎಂದು ಸಿರಿಯಾ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಈ ದಾಳಿಯನ್ನು ಇಸ್ರೇಲ್ ನೇತೃತ್ವದ ಪಡೆಗಳು ನಡೆಸಿದ್ದು, ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಅದು ಹೇಳಿದೆ. ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ