ಹಿರಿಯೂರು,ಮೇ1-ಕಳೆದ ಹತ್ತು ವರ್ಷಗಳಿಂದ ಸಮುದಾಯಕ್ಕೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿರುವ ಶಾಸಕ ಸುಧಾಕರ್ಗೆ ಸಮುದಾಯ ಬೆಂಬಲಿಸಲಿದೆ ಎಣದಯ ವಾಲ್ಮೀಕಿಗುರುಪೀಠದ ಪ್ರಸನ್ನಾನಂದ ಶ್ರೀ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ನಾಯಕ ಜನಾಂಗದ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಮತಬ್ಯಾಂಕ್ ಮಾಡಿಕೊಂಡು ನಂತರ ಸಮುದಾಯವನ್ನು ವಂಚಿಸುವವರ ನಡುವೆ ಸುಧಾಕರ್ ಅಪರೂಪದ ರಾಜಕೀಯ ನಾಯಕರಾಗಿದ್ದು, ಸಮುದಾಯದವು ಅವರಿಗೆ ತಾಲೂಕಿನಲ್ಲಿ ನಿರ್ಣಾಯಕವಾಗಿ ಬೆಂಬಲಿಸಬೇಕಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷ ಇ.ಮಂಜುನಾಥ್ ಮಾತನಾಡಿ, ತಾ ಪಂ ಅಧ್ಯಕ್ಷ ಸ್ಥಾನ ನಾಯಕ ಸಮುದಾಯಕ್ಕೆ ಸಿಗಲು ಶಾಸಕರೇ ನೇರ ಕಾರಣ. ವಿಪಕ್ಷಗಳು ನಾಯಕರಿಗೆ ತಾ ಪಂ ಅಧ್ಯಕ್ಷಗಿರಿ ಸಿಗದಂತೆ ಮಾಡಲು ಎಷ್ಟೇ ಪಿತೂರಿ ಮಾಡಿದರೂ ಶಾಸಕರು ಕೈಬಿಡಲಿಲ್ಲ. . ತಾಲೂಕಿನಲ್ಲಿ ನೂರಾರು ಹಳ್ಳಿಗಲ್ಲಿ ವಾಲ್ಮೀಕಿ ಭವನ,ನಗರದಲ್ಲಿಕೋಟ್ಯಂತರರೂ ವೆಚ್ಚದ ನಿವೇಶನ ಮತ್ತು ಭವನ ನಿರ್ಮಾಣ ಮ ಮಾಡಿಕೊಟ್ಟಿದ್ದು, ಜನಾಂಗ ಈ ಬಾರಿ ಅವರನ್ನು ಬೆಂಬಲಿಸುತ್ತದೆ ಎಂಬುದಾಗಿ. ತಿಳಿಸಿದರು
ಶಾಸಕ ಡಿ.ಸುಧಾಕರ್ ಮಾತನಾಡಿ, ಶೋಷಿತ ವರ್ಗಗಳ ಏಳಿಗೆಗೆ ನನ್ನರಾಜಕೀಯ ಬದುಕನ್ನು ಮುಡಿಪಾಗಿಟ್ಟಿದ್ದೇನೆ. ಮೊದಲು ಎಸ್ಸಿ- ಎಸ್ಟಿ, ಹಿಂದುಳಿದವ ವರ್ಗ, ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಪಾಲನ್ನು ನೀಡಿದ ನಂತರವೇ ಉಳಿದವರ ಬಗ್ಗೆ ಯೋಚಿಸುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ಹಾಗಾಗಿ ಮುಂದೆಯೂ ಈ ಸಮುದಾಯದ ಪರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲು ಈ ಚುನಾವಣೆಯಲ್ಲಿ ನಾಯಕ ಸಮುದಾಯದ ಬೆಂಬಲ ಮಹತ್ವದ್ದಾಗಿದೆ ಎಂದರು.
ಶಾಸಕ ಡಿ.ಸುಧಾಕರ್ ಮತ್ತು ಹರ್ಷಿಣಿ ಸುಧಾಕರ್ ದಂಪತಿಗಳು ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ತಾಪಂಅಧ್ಯಕ್ಷ ಎಸ್.ಚಂದ್ರಪ್ಪ, ಹಾಗೂ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣಪ್ರದೇಶದಿಂದ ಬಂದಿದ್ದ ನೂರಾರು ಸಮುದಾಯದ ಮುಖಂಡರು ಹಾಜರಿದ್ದರು.