ಮುಂಬೈ, ಮೇ 1-ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುದ್ದಿನ ಮಡದಿ ಹಾಗೂ ಬಾಲಿವುಡ್ ಯಶಸ್ವಿ ನಟಿ ಅನುಷ್ಕಾ ಶರ್ಮಗೆ ಇಂದು 30ನೇ ಜನ್ಮದಿನದ ಸಡಗರ-ಸಂಭ್ರಮ. ಹಿಂದಿ ಚಿತ್ರರಂಗದ ಖ್ಯಾತನಾಮರು ಮತ್ತು ಅಸಂಖ್ಯಾತ ಅಭಿಮಾನಿಗಳು ಅನುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಾಣಿ ಪ್ರಿಯೆಯಾದ ಅನು ತಮ್ಮ ಜನ್ಮದಿನದ ಸಂದರ್ಭದಲ್ಲಿ, ಮುಂಬೈ ಹೊರವಲಯಲ್ಲಿ ಪರಿತ್ಯಕ್ತ ಪ್ರಾಣಿಗಳಿಗಾಗಿ ಆಲಯವೊಂದನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಪ್ರಾಣಿ-ಪಕ್ಷಿಗಳಿಗಾಗಿ ನೆರವಾಗಬೇಕೆಂಬುದು ಸದಾ ನನ್ನ ಬಯಕೆ. ಇದೇ ಕಾರಣಕ್ಕಾಗಿ ದಿಕ್ಕಿಲ್ಲದ ಜೀವಿಗಳಿಗಾಗಿ ಆಶ್ರಯತಾಣ ನಿರ್ಮಿಸುತ್ತಿದ್ದೇನೆ. ಆ ಮೂಲಕ ಅವುಗಳಿಗೆ ಪ್ರೀತಿಯಿಂದ ಆರೈಕೆ ಮಾಡಿ ಪೆÇೀಷಿಸುವ ಬಯಕೆಯನ್ನು ಸಾಕಾರಗೊಳಿಸುತ್ತೇನೆ ಎಂದು ಅನು ಹೇಳಿದ್ದಾರೆ.
ನಟಿಯಾಗಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಈ ಬೆಡಗಿ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಅನು ನಟಿಸಿದ ಬಹುತೇಕ ಎಲ್ಲ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದಿವೆ. ಎನ್ಎಚ್-10, ಫಿಲ್ಲೌರಿ ಮತ್ತು ಪರಿ ಸಿನಿಮಾಗಳನ್ನು ನಿರ್ಮಿಸಿರುವ ಈ ನಟಿ ರಷ್ಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಹಿಂದಿ ಚಿತ್ರವನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಈಕೆಗೆ ದಾದಾಸಾಹೇಬ್ ಫಾಲ್ಕೆ ಎಕ್ಸಿಲೆನ್ಸಿ ಪ್ರಶಸ್ತಿ ಲಭಿಸಿದೆ.