ವಾಷಿಂಗ್ಟನ್, ಮೇ 1-ಭಾರತೀಯ ಮೂಲದ ಖ್ಯಾತ ಖಗೋಳ ವಿಜ್ಞಾನಿ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಅಮೆರಿಕದ ಹೀರೊ ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಅವರು ಖಗೋಳ ವಿಜ್ಞಾನಿಗಳಾಗಲು ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.
ಪ್ರತಿ ವರ್ಷ ಮೇ ತಿಂಗಳನ್ನು ಅಮೆರಿಕ ಕಾಂಗ್ರೆಸ್ ಏಷ್ಯನ್/ಪೆಸಿಫಿಕ್ ಅಮೆರಿಕನ್ ಪರಂಪರೆ ಮಾಸವನ್ನಾಗಿ ಆಚರಿಸಲಿದ್ದು, ಇದನ್ನು ಅಧಿಕೃತವಾಗಿ ಟ್ರಂಪ್ ಘೋಷಿಸಿ, ಕಲ್ಪನಾ ಚಾವ್ಲಾ ಅವರ ಸಾಧನೆಗಳ ಗುಣಗಾನ ಮಾಡಿದರು.
ಅಂತರಿಕ್ಷ ಯಾತ್ರೆ ಕೈಗೊಂಡ ಭಾರತ ಮೂಲದ ಅಮೆರಿಕದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಕಲ್ಪನಾ ಪಾತ್ರವಾಗಿದ್ದರು. 2003ರಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾ ಭೂಮಿಗೆ ಹಿಂದಿರುಗುವಾದ ಸ್ಫೋಟಗೊಂಡು ಕಲ್ಪನಾ ಸೇರಿದಂತೆ ಏಳು ಖಗೋಳ ಯಾತ್ರಿಗಳು ಗಗನದಲ್ಲೇ ದಹಿಸಿ ಹೋದರು.