ತುರುವೇಕೆರೆ, ಮೇ 1- ತಾಲ್ಲೂಕಿನ ಮಾಯಸಂದ್ರ ಟಿ.ಬಿ. ಆದಿಚುಂಚನಗಿರಿ ಎಸ್.ಬಿ.ಜಿ. ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಶೇ 79.22 ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಒಟ್ಟು 77 ಮಂದಿ ಪರೀಕ್ಷೆಗೆ ಕುಳಿತಿದ್ದು 61 ವಿಧ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ದಿಸ್ಟಿಂಗ್ಷನ್ 12, ಪ್ರಥಮ ದರ್ಜೆ 38 ಹಾಗು ದ್ವಿತೀಯ 11.
ಕುಮಾರಿ ಮೇಘನಾ ಅತ್ಯಂತ ಹೆಚ್ಚಿನ ಅಂಕ 557 ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ. ಗಣಿತದಲ್ಲಿ 100, ಭೌತಶಾಸ್ತ್ರದಲ್ಲಿ 99 ಅಂಕ ಗಳಿಸಿ ಶೇ. 92.8 ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲಾ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ವಿಧ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.