ಯೂನಿಟಿ ಕಾಲೇಜಿನ ಅತ್ಯುತ್ತಮ ಫಲಿತಾಂಶ:

ನಂಜನಗೂಡು, ಮೇ 1- ದ್ವಿತೀಯ ಪಿಯುಸಿ. ಪರೀಕ್ಷೆಯಲ್ಲಿ ಯೂನಿಟಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ತರುವ ಮೂಲಕ ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿಗೆ 40 ಅತ್ಯುತ್ತಮ ಶ್ರೇಣಿ ಮತ್ತು 65 ಪ್ರಥಮ ದರ್ಜೆ ಲಭಿಸಿದೆ.
ವಿಜ್ಞಾನ ವಿಭಾಗ: ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು 92. ಉತ್ತೀರ್ಣರಾದವರು 91. ಶೇ.99ರಷ್ಟು ಫಲಿತಾಂಶ ಬಂದಿದೆ. ಸೌಜನ್ಯ (583), ನಿಖಿಲ್ ಆರ್.ವಿ (582), ದರ್ಶನ್ ಡಿ. (575) ತಾಲ್ಲೂಕಿಗೆ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ 32, ಪ್ರಥಮ ದರ್ಜೆಯಲ್ಲಿ 52, ದ್ವಿತೀಯ ದರ್ಜೆಯಲ್ಲಿ 07 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ 08,ಪ್ರಥಮ ದರ್ಜೆಯಲ್ಲಿ 13, ಉಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಜನಿ ಎಂ. 579 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 573 ಅಂಕ ಗಳಿಸಿರುವ ಮಹತಿ ಎಂ. ಕಾಲೇಜಿಗೆ ದ್ವಿತೀಯ ಸ್ಥಾನ ಮತ್ತು 549 ಅಂಕಗಳನ್ನು ಗಳಿಸಿರುವ ರಚನಾ ಬಿ. ತೃತೀಯ ಸ್ಥಾನ ಪಡೆದಿದ್ದಾರೆ.
ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ 06, ಸಂಸ್ಕøತ ವಿಷಯದಲ್ಲಿ 04, ಗಣಿತದಲ್ಲಿ 02, ಲೆಕ್ಕಶಾಸ್ತ್ರದಲ್ಲಿ 02, ಅರ್ಥಶಾಸ್ತ್ರದಲ್ಲಿ 01, ವ್ಯವಹಾರ ಅಧ್ಯಯನದಲ್ಲಿ 01 ಮತ್ತು ಕನ್ನಡದಲ್ಲಿ 01 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿರುತ್ತಾರೆ.
ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರಿಗೆ ಕಾಲೇಜಿನ ಅಧ್ಯಕ್ಷೆ ಹಜಿರಾ ಸಯ್ಯದ್, ಆಡಳಿತ ವಿಭಾಗದ ಕಾರ್ಯದರ್ಶಿ ರಾಮ್ ಮೋಹನ್ ಮತ್ತು ಸಂಸ್ಥಾಪಕ ಅಧ್ಯಕ್ಷ ಸಯ್ಯದ್ ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ