ವಿಜಯೇಂದ್ರಗೆ ಟಿಕೆಟ್ ತಪ್ಪಿದ ಪರಿಣಾಮ ಬಿಜೆಪಿ ಕಾರ್ಯಕರ್ತರ ಮುಂದುವರೆದ ಆಕ್ರೋಶ ಹಿನ್ನೆಲೆ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಬಿಜೆಪಿ

ಮೈಸೂರು:ಏ-30: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ರಾಮದಾಸ್ ಪರ‌ ವಿಜಯೇಂದ್ರ ಮತಯಾಚನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿರುವ ವಿಜಯೇಂದ್ರ .ರಾಮದಾಸ್ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ರಾಮದಾಸ್ ಪರ ಮತಯಾಚನೆ ಮಾಡಿದ್ದಾರೆ.

ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಲು ರಾಮದಾಸ್ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ವಿಜಯೇಂದ್ರರಿಂದಲೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ರಾಮದಾಸ್.ವಿಜಯೇಂದ್ರ ಮತಯಾಚನೆ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ರಾಮದಾಸ್ ಬೆಂಬಲಿಗರು ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕಿರುವುದು ಈಗ ಮುಖ್ಯವಾದ ಸಂಗತಿ.ಎಲ್ಲರೂ ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್ ಪರ ಮತಹಾಕಬೇಕು.
ಆ ಮೂಲಕ ಯಡಿಯೂರಪ್ಪ ಕೈ ಬಲಪಡಿಸಬೇಕು.ಕೆಲ ವದಂತಿಗಳು ಹಬ್ಬಿದ್ದು ಅವುಗಳಿಗೆಲ್ಲಾ ಕಾಂಗ್ರೆಸ್ ಪಕ್ಷದ ಕುತಂತ್ರ ಕಾರಣವಾಗಿದೆ.ಯಾರೂ ಸಹ ಯಾವದೇ ವದಂತಿಗಳಿಗೆ ಕಿವಿಗೋಡಬೇಡಿ.ಎಲ್ಲರೂ ಬಿಜೆಪಿ ಪರವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ ಪರಿಸ್ಥಿತಿ ತಿಳಿಗೊಳಿಸಲು ವಿಜಯೇಂದ್ರ‌ರಿಂದಲೇ ಮನವಿ ಮಾಡಿಸಿದ ಬಿಜೆಪಿ, ಬಿಎಸ್‌ವೈ ಕೆ.ಆರ್.ಕ್ಷೇತ್ರದ ಪ್ರಚಾರಕ್ಕೆ ಬರುವ ಮುನ್ನವೇ ವಿಜಯೇಂದ್ರ ವಿಡಿಯೋ ವೈರಲ್ ಆಗುವಂತೆ ಮಾಡಿದೆ.

BJP,Vijayeendra,Video Viral,S A Ramdas

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ