
ಚಿತ್ತೂರು, ಏ.29-ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಂಖಂ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಇತರ 10 ಮಂದಿ ತೀವ್ರ ಗಾಯಗೊಂಡಿದ್ದಾರೆ. ಟೆಂಪೆÇ ಟ್ರಾವೆಲ್ ಮತ್ತು ಬೊಲೆರೋ ವಾಹನದ ನಡುವೆ ಡಿಕ್ಕಿಯಾಯಿತು. ತಮಿಳುನಾಡಿನ ಸೇಲಂನ ಕನ್ನಿಮೋಳಿ, ಲೋಕೇಶ್ ಮತ್ತು ಟೆಂಪೆÇೀ ಚಾಲಕ ವೆಂಕಟಾಚಲ ಈ ಅಪಘಾತದಲ್ಲಿ ಮೃತಪಟ್ಟರು. ಗಾಯಗೊಂಡಿರುವ 10 ಮಂದಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತದ ನಂತರ ಬೊಲೊರೊ ಚಾಲಕ ಪರಾರಿಯಾಗಿದ್ದಾನೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.