ಉಸಿರಾಟದ ಔಷಧಗಳು ಉಬ್ಬಸದಂತಹ ಶ್ವಾಸಕೋಶದ ರೋಗಗಳ ನಿರ್ವಹಣೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ: ಪೀಡಿಯಾಟ್ರೀಕ್ ಪಲ್ಮೊನಾಲಜಿಸ್ಟ್, ಡಾ|| ಹುಲಿರಾಜ್

ಬೆಂಗಳೂರು, ಏ.29-ಉಸಿರಾಟದ ಔಷಧಗಳು ಉಬ್ಬಸದಂತಹ ಶ್ವಾಸಕೋಶದ ರೋಗಗಳ ನಿರ್ವಹಣೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ. ಔಷಧಗಳನ್ನು ನೇರವಾಗಿ ಶ್ವಾಸಕೋಶಗಳಿಗೆ ನೀಡುವುದರಿಂದ ಬೇಗನೆ ಕಡಿಮೆ ಡೋಸ್ ನಲ್ಲಿ ಕಾರ್ಯ ನಿರ್ವಹಿಸಿ ಅಪಾಯವನ್ನು ಕಡಿಮೆ ಮಾಡುತ್ತದೆ. ರೋಗದ ಸ್ಥಿತಿಯನ್ನು ಸುಧಾರಿಸಿ ಜೀವನದ ಗುಣಮಟ್ಟವನ್ನು ಸುಧಾರಿಸಿರುವುದು ಕಂಡು ಬಂದಿದೆ ಎಂದು ಪೀಡಿಯಾಟ್ರೀಕ್ ಪಲ್ಮೊನಾಲಜಿಸ್ಟ್, ಡಾ|| ಹುಲಿರಾಜ್ ಹೇಳಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಸ್ತಮಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಆದರೆ ಕಳೆದ 60 ವರ್ಷಗಳ ಹಿಂದೆ ನಡೆದ ಒಂದು ಚಿಕಿತ್ಸೆಯ ಕ್ರಾಂತಿಯು ಲP್ಷÁಂತರ ಜನರು ಆರಾಮವಾಗಿ ಉಸಿರಾಡುವಂತೆ ಮಾಡಿತು. ಈ ಕ್ರಾಂತಿಯಿಂದ ಉಬ್ಬಸ (ಅಸ್ತಮಾ)ರೋಗಿಗಳಲ್ಲಿ ಮತ್ತು ಸಮಾಜದಲ್ಲಿ ನಕಾರಾತ್ಮಕ ಭಾವನೆಗಳನ್ನು ತಡೆಗಟ್ಟುತ್ತಾ ಬಹಳ ದೂರ ಬಂದಿದೆ ಎಂದರು.
ಎಲ್ಲರಿಗೂ ಉಸಿರಾಟದ ಸಮಸ್ಯೆಯ ಬಗ್ಗೆ ತಿಳಿದಿದ್ದರು! ರೋಗನಿರ್ಣಯವೂ ಬಹಳ ಸಮಸ್ಯೆಯಾಗಿತ್ತು, ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಸಾಮಾನ್ಯವಾಗಿ ಟಿಬಿ ಎಂದು ತಿಳಿಯಲಾಗಿದ್ದು, ಇದು 70 ದಶಕದವರೆಗೂ. ಈ ರೋಗದ ಬಗ್ಗೆ ಇದ್ದ ಕಡಿಮೆ ಅರಿವು ಮತ್ತು ತಿಳಿವಳಿಕೆಯು ರೋಗನಿರ್ಣಯವನ್ನು ಜಟಿಲಗೊಳಿಸಿತ್ತು ಎಂದು ತಿಳಿಸಿದರು.

ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಹಾಗೂ ಡಾ.ಕೆ.ಆರ್ ಭಾರತ್ ಕುಮಾರ್ ರೆಡ್ಡಿ ಮಾತನಾಡಿ, ನವೀನ ಮತ್ತು ಅನನ್ಯವಾದ ಉತ್ಪನ್ನಗಳು ಚಿಕಿತ್ಸೆಯಲ್ಲಿ ರೋಗಿಗಳಿಗೆ ಆಯ್ಕೆಯನ್ನು ನೀಡುತ್ತಿವೆ. ಚಿಕಿತ್ಸೆಯನ್ನು ನಿಯತವಾಗಿ ಸ್ವೀಕರಿಸಿ, ಇನ್ಹೇಲರ್ ಗಳನ್ನು ಸರಿಯಾಗಿ ಬಳಸಲು ರೋಗಿಗಳಿಗೆ ಸೂಚನೆ ನೀಡುವ ಉಪಕ್ರಮಗಳು, ಬಳಕೆದಾರ ಸ್ನೇಹಿ ರೋಗನಿರ್ಣಯದ ಉಪಕರಣಗಳ ಮತ್ತು ಹೊಸ ಇನ್ಹೇಲರ್‍ಗಳ ಅಭಿವೃದ್ಧಿ, ಇವುಗಳ ಮೂಲಕ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಿ, ಭಾರತದಲ್ಲಿ ಶ್ವಾಸಕೋಶ ಆರೈಕೆಯ ಮಟ್ಟವನ್ನು ವರ್ಧಿಸುವುದೂ ಮುಖ್ಯವಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ