ರಾಜ್ಯಮಟ್ಟದ ಹೊನಲು-ಬೆಳಕಿನ ಕುಸ್ತಿ ಪಂದ್ಯಾವಳಿ; ಮಹಿಳಾ ತಂಡಗಳಿಗೆ ಗೆಲುವು

ಬೆಂಗಳೂರು, ಏ.29-ಚಾಲುಕ್ಯ ಡಾ.ರಾಜ್‍ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ಟ್ರಸ್ಟ್ ವತಿಯಿಂದ ಕುರುಬರಹಳ್ಳಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು-ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಮಹಿಳಾ ತಂಡಗಳು ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದ್ದು ವಿಶೇಷವಾಗಿತ್ತು.
ಪಾಯಿಂಟ್ ಪ್ರಶಸ್ತಿಗಾಗಿ ಬಾರಿ ಜಿದ್ದಾಜಿದ್ದಿನ ಮಟ್ಟಿ ಕುಸ್ತಿಯನ್ನು ಸೆಣಸಾಡಿದರು. ಇದರಲ್ಲಿ ಶಾಮಣ್ಣ ಗಾರ್ಡನ್ ಮತ್ತಾಂಜನೇಯ ವ್ಯಾಯಾಮ ಶಾಲೆಯ ಬೆಂಗಳೂರಿನ ಲಿಖಿತ್.ಎಸ್ ಅವರು ಪ್ರಥಮ ಸ್ಥಾನ ಪಡೆದು, ಬೆಳ್ಳಿ ಗದೆ, 20 ಸಾವಿರ ನಗದು ಹಾಗೂ ಚಾಲುಕ್ಯ ಡಾ.ರಾಜ್‍ಕುಮಾರ್ ಕುಸ್ತಿ ಕೇಸರಿ ಬಿರುದು ನೀಡಿ ಸನ್ಮಾನಿಸಲಾಯಿತು.

ಕನಕಪುರ ವ್ಯಾಯಾಮ ಶಾಲೆಯ ಸ್ವರೂಪಗೌಡ, ವಸಂತನಗರ ವ್ಯಾಯಾಮ ಶಾಲೆಯ ಅಜಯ್ ಹಾಗೂ ಹೊಹಮ್ಮದ್ ಸೊಪಿಯ, ದ್ವೀತಿಯ ಸ್ವಾನವನ್ನು ಪಡೆದುಕೊಂಡರು.

ಈ ವೇಳೆ ಹಿರಿಯ ಪೈಲ್ವಾನರು ಮಾತನಾಡಿ, ಬೆಂಗಳೂರಿನ ಕಂಠೀರವ ಕೀಡಾಂಗಣವನ್ನು ಕುಸ್ತಿಗಾಗಿ ನಿರ್ಮಿಸಬೇಕು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಟಿಕೆಟ್‍ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬದಲು ಗ್ರಾಮೀಣ ಕ್ರೀಡೆಗಳನ್ನು ಪೆÇ್ರೀ ತಾಲ್ಲೂಕು, ಗ್ರಾಮಗಳಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಬೇಕು ಎಂದು ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ