
ಚಿಕ್ಕಮಗಳೂರು, ಏ.29-ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದೆ ಎಂದು ಆರೋಪಿ ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರೇಖಾ ಹುಲಿಯಪ್ಪ ಗೌಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‍ವೈ ಅವರಿಗೆ ರಾಜೀನಾಮೆ ಕಳಿಸಿರುವುದಾಗಿ ಪತ್ರದ ಪ್ರತಿಯನ್ನು ಕೊಟ್ಟರು.
ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ಮಾಡಿಕೊಡದೆ ಅನ್ಯಾಯ ಮಾಡಿವೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಉಂಟು. 2008, 2017ರ ಚುನಾವಣೆಯಲ್ಲಿ ತಾವು ಕಡೂರು ಕ್ಷೇತ್ರದಿಂದ ಅಕಾಂಕ್ಷಿಯಾಗಿ ಹೇಳಿಕೊಂಡಿದರೂ ಸಾಮಥ್ರ್ಯವಿದ್ದರೂ ಕಡೆಗಣಿಸಲಾಯಿತು. ಮುಂದೆ ಅವಕಾಶ ಕೊಡಬಹುದು ಎಂದು ನಂಬಿ ಪಕ್ಷಕ್ಕಾಗಿ ಕೊಡಬಹುದು ಎಂದು ನಂಬಿ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಈ ಬಾರಿ ನನ್ನನ್ನು ಕಡೆಗಣಿಸಿ ಟಿಕೆಟ್ ತಪ್ಪಿಸಲಾಗಿದೆ. ಹಾಗಗಿ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಬರುತ್ತಿರುವುದಾಗಿ ಹೇಳಿದರು.
ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಸೆರಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಪ್ರಬಲ ಕೋಮಿನ ಮುಖಂಡಯಾಗಿರುವ ರೇಖಾ ಬಿಜೆಪಿ ತೊರೆದಿರುವುದು ಜಿಲ್ಲೆಯಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಡರೂ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ 5ರಿಂದ 8 ಸಾವಿರ ಮತಗಳು ಬಿಜೆಪಿ ಪಕ್ಷಕ್ಕೆ ಒತ್ತಡ ಬೀಳಲಿದೆ ಎಂದು ಸಾರ್ವಜನಿಕರ ವಲಯದಲ್ಲಿ ಅಂದಾಜಿಸಲಾಗಿದೆ.
ಸಿದ್ದರಾಮಯ್ಯ ದೂರವಾಣಿ ಮೂಲಕ ರೇಖಾ ಅವರನ್ನು ಸಂಪರ್ಕಿಸಿ. ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಕೂಡ ರೇಖಾ ಅವರನ್ನು ಸಂಪರ್ಕಿಸಿ ಮಾತುಕಥೆ ನಡೆಸಿದ್ದಾರೆ.
ಈ ವಿಚಾರ ತಿಳಿಯುತ್ತದೆ ಶಾಸಕ ರವಿ ರೇಖಾ ಅವರ ಮನೆಗೆ ತೆರಳಿ ಪಕ್ಷ ಬಿಡದಂತೆ ಮನವೊಲಿಸುವ ಪ್ರಯತ್ನ ವಿಫಲವಾಯಿತು.
ಸಾವಿರಾರು ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಮುಂದಿನ ಹೆಜ್ಜೆ ಏನೆಂಬುದು ನಾಳೆ ತಿಳಿಯಲಿದೆ.