ಭದ್ರ ಜಲಾಶಯದಿಂದ ಜಲ ಭಂಡೆ ನಾಲೆಗೆ ಮೇ 26ರವರೆಗೆ ನೀರು: ರೈತ ಸಂಘ ಮನವಿ

ದಾವಣಗೆರೆ, ಏ.29- ಭದ್ರ ಜಲಾಶಯದಿಂದ ಜಲ ಭಂಡೆ ನಾಲೆಗೆ ಮೇ 26ರವರೆಗೆ ನೀರು ಮುಂದುವರೆಸಬೇಕೆಂದು ರೈತ ಸಂಘ ಮನವಿ ಮಾಡಿದೆ.
ಹರಿಹರ ತಾಲ್ಲೂಕು ರಾಣಿ ಬೆನ್ನೂರು ಭದ್ರ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಆಗಮಿಸಿ ರೈತ ಸಂಘದ ಮುಖಂಡರು ನಿನ್ನೆ ಸಂಜೆ ಮನವಿ ಪತ್ರ ಸಲ್ಲಿಸಿದರು.
ಮಲೆಬೆನ್ನೂರು ಉಪವಿಭಾಗದ ಕೊನೆ ಭಾಗದ ಹಳ್ಳಿಗಳಿಗೆ ವ್ಯಾನ್‍ನಿಂದ ನೀರು ಬಿಟ್ಟು ಒಂದೂವರೆ ತಿಂಗಳ ನಂತರ ನೀರು ಸಲ್ಲಿಸಿದೆ. ಆ ಭಾಗದ ರೈತರು ತಡವಾಗಿ ನಾಟಿ ಮಾಡುವುದರಿಂದ ಭತ್ತದ ಬೆಳೆ ಈಗ ಕಾಳು ಕಟ್ಟವ ಹಂತದಲ್ಲಿದೆ ಕನಿಷ್ಟ ಇನ್ನೂ ಒಂದು ತಿಂಗಳ ನೀರು ಅವಕಶ್ಯಕತೆ ಇದೆ. ಅದರೆ ಜಲಾಶಯದಲ್ಲಿನೀರಿನ ಪ್ರಮಾಣ ಕಡಿಮೆ ಎಂ ಅರಿವು ನಮಗೂ ಇದೆ ಎಂದರು.
ಈಗ ಇರುವ ನೀರು ಎಲ್ಲಿಗೆವರೆಗೆ ನಾಲೆಗೆ ಬರುತ್ತದೆಯೋ ಅಲ್ಲಿಯವರೆಗೆ ಹರಿಸಿ ತದನಂತರ ಲಿಸ್ಟ್ ಮಾಡಿ ನೀರುವ ಕೊಡುವ ಕೆಲಸವನ್ನು ನೀರಾವರಿ ನಿಗಮ ಅಧಿಕಾರಿಗಳು ಮಾಡಬೇಕು .
ಮೂರು ಬೆಳೆಗಳಿಂದ ನೀರು ಇಲ್ಲದೆ ಕಂಗಾಲಾಗಿರುವ ರೈತರು ಭದ್ರ ಕಾಡ ಸಮಿತಿಯ ಮೇರೆಗೆ ಸಾಲಸೋಲ ಮಾಡಿ ನಾಟಿ ಮಾಡಿದ್ದಾರೆ. ಬೆಳೆ ಚೆನ್ನಾಗಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಲು ಕೈ ಕಟ್ಟಿ ಕುಳಿತುಕೊಳ್ಳದೆ ರೈತರ ಬೆಳೆ ಉಳಿಸಲು ಪರ್ಯಾಯ ಮಾರ್ಗ ಹುಡುಕಬೇಕೆಂದು ರೈತ ಮುಖಂಡರಾದ ಓಂಕಾರಪ್ಪ ಪ್ರಭಾಗೌಡ ಒತ್ತಾಯಿಸಿದರು.
ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕೂಡಲೇ ಭದ್ರ ಕಾಡ ಸಮಿತಿ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸಭೆ ಇಲ್ಲವೇ ಮೇ 2ರಿಂದ ಮಲೆಬೆನ್ನೂರಿನಲ್ಲಿ ರೈತರು ಧರಣಿ ಸತ್ಯಾಗ್ರಹ ಪ್ರಾರಂಭೀಸುತ್ತೇವೆ ಜೊತೆಗೆ ವಿಧಾನಸಭೆಯ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ