ಮೈಸೂರು:ಏ-28: ರಾಜ್ಯದ ರೈತರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಗಳಿಗೆ ಒಪ್ಪಿರುವ ಜೆಡಿಎಸ್ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕಬ್ಬು ಬೆಳೆಗಾರರ ಸಂಘವನ್ನು ಮನವಿ ಮಾಡಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ.ರೈತರ ಪ್ರಣಾಳಿಕೆಗೆ ನಮ್ಮ ಒಪ್ಪಿಗೆ ಇದೆ. ನಮ್ಮದು ರೈತ ಪರ ಸರ್ಕಾರವಾಗಲಿದೆ. ನಿಮ್ಮ ಪ್ರಣಾಳಿಕೆಯೇ ನಮ್ಮ ಪ್ರಣಾಳಿಕೆ. ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ರೈತರ ಸಭೆ ನಡೆಯುತ್ತಿರುವ ವೇಳೆಯೇ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷರಿಗೆ ಕರೆ ಮಾಡಿದ ಹೆಚ್ ಡಿ ಕುಮಾರಸ್ವಾಮಿ, ರೈತರ ಬೇಡಿಕೆಗಳಿಗೆ ತಮ್ಮ ಸಂಪೂರ್ಣ ಒಪ್ಪಿಗೆಯಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಯಾವ ಪಕ್ಷಕ್ಕೆ ತಮ್ಮ ಬೆಂಬಲ ಎಂದು ಕಬ್ಬು ಬೆಳೆಗಾರರು ತೀರ್ಮಾನಿಸಲಿದೆ.
Karnataka Assembly Election,Farmers separate manifesto,H D Kumaraswami