ಬೆಂಗಳೂರು, ಏ.27-ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಬೆಂಬಲಿತ ಉದ್ಯಮಿಗಳ ಟೆಲೆಫೋನ್ಗಳನ್ನು ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವuಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಕೇಂದ್ರ ಸರ್ಕಾರ ನಮ್ಮ ಪಕ್ಷದ ಚುನಾವಣೆ ರಣತಂತ್ರಗಳನ್ನು ಕದ್ದಾಲಿಸುತ್ತಿದೆ ಎಂದು ಆರೋಪಿಸಿದರು.
ಕದ್ದಾಲಿಕೆಗಾಗಿಯೇ ಗುಜರಾತ್ ಮತ್ತು ಜೈಪುರದಿಂದ ಕೆಲವು ತಂತ್ರಜ್ಞರನ್ನು ಕರೆಸಿಕೊಳ್ಳಲಾಗಿದೆ. ಕದ್ದಾಲಿಸಿದ ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲೀಷ್ಗೆ ತರ್ಜುಮೆ ಮಾಡಿ ಕೇಂದ್ರದ ಬಿಜೆಪಿ ನಾಯಕರಿಗೆ ರವಾನಿಸಲಾಗುತ್ತಿದೆ ಎಂದು ರೆಡ್ಡಿ ಹೇಳಿದರು.
ಸೋರಿಕೆಯಾಗುತ್ತಿರುವ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾಂಗ್ರೆಸ್ ಬೆಂಬಲಿಸಬಾರದು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ದೂರಿದರು.
ಕದ್ದಾಲಿPಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ತನಿಖೆ ನಡೆಸಿ ಕ್ರಮ ಜರುಗಿಸಲಾಗುತ್ತದೆ ಎಂದರು.
ಆದಾಯ ತೆರಿಗೆ ಅಧಿಕಾರಿಗಳು ಶಾಸಕ ಶಿವಣ್ಣ ಅವರ ಮನೆ ಮೇಲೆ ದಾಳಿ ಮಾಡಿ 4.75 ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾರೆ. ಬಿಜೆಪಿಯವರು ಐಟಿ ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಬದಲು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಿ ಎಂದು ಅವರು ಗುಡುಗಿದರು.
ಜನಾರ್ಧನ್ ರೆಡ್ಡಿ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದೆ. ಒಂದೆಡೆ ಷಾ ಅವರು ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ ಆದರೆ, ಶ್ರೀರಾಮುಲು ನಾಮಪತ್ರ ಸಲ್ಲಿಕೆ ವೇಳೆ ರೆಡ್ಡಿ ಅವರು ಮದ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಹಾಜರಾಗಿದ್ದಾರೆ. ಇದನ್ನು ನೋಡಿದರೆ ಕೇಂದ್ರ ಹಾಗೂ ಬಿಜೆಪಿ ನಾಯಕರ ನಡುವೆ ಸಾಮರಸ್ಯದ ಕೊರತೆ ಎದ್ದುಕಾಣುತ್ತಿದೆ ಎಂದು ಲೇವಡಿ ಮಾಡಿದರು.
ಸುಳ್ಳು ಜಾಹೀರಾತು ನೀಡುತ್ತಿರುವ ಬಿಜೆಪಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.
ಆಧಾರ ರಹಿತವಾಗಿ ಕಪೆÇೀಲ ಕಲ್ಪಿತ ಮಾಹಿತಿಗಳನ್ನು ಬಿಜೆಪಿ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಿದೆ. ಹಸಿದವರಿಗೆ ಊಟ ಹಾಕಿದ ಅನ್ನಭಾಗ್ಯವನ್ನು ಟೀಕಿಸಲಾಗುತ್ತಿದೆ. ಕೈಮ್ನಲ್ಲಿ ಕರ್ನಾಟಕ ನಂ.1 ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಲ್ಲಿ 1260 ಕೊಲೆಗಳಾಗಿದ್ದು ನಮ್ಮ ಅವಧಿಯಲ್ಲಿ1056 ಕೊಲೆಗಳಾಗಿವೆ. ಕೊಲೆಗಳ ಪ್ರಮಾಣ ಕಡಿಮೆ ಇದೆ. ರಾಜ್ಯಮಟ್ಟದಲ್ಲಿ 1500 ಕೊಲೆಗಳು ಕಡಿಮೆಯಾಗಿವೆ. ಅಪರಾಧದಲ್ಲಿ ಉತ್ತರ ಪ್ರದೇಶ ಈಗಲೂ ನಂ.1 ಸ್ಥಾನದಲ್ಲಿದೆ. ನಮ್ಮ ರಾಜ್ಯ 6ರಿಂದ 7ನೇ ಸ್ಥಾನಕ್ಕೆ ಇಳಿದಿದ್ದು ಈಗ ಅಪರಾಧ ಶೇ. 4.7ರಷ್ಟಿದೆ ಎಂದು ತಿಳಿಸಿದರು.
ಅತ್ಯಾಚಾರಿಗಳನ್ನು ರಕ್ಷಿಸಿದ್ದು ಕಾಶ್ಮೀರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಬಿಜೆಪಿಯವರು. ಕರ್ನಾಟಕದಲ್ಲಿ ಬಿಎಸ್ವೈ ಜೈಲಿಗೆ ಹೋಗಿ ಬಂದವರು. ರಾಜ್ಯವನ್ನು ದಿವಾಳಿ ಮಾಡಿದವರು.ಇಂತಹ ವಿಷಯವನ್ನು ಜಾಹಿರಾತಿಯಲ್ಲಿ ಬಿಜೆಪಿಯವರು ಹೇಳಬೇಕು ಎಂದು ತಿಳಿಸಿದರು.