ಹೆಬ್ಬಾಳ ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡರ ಸುಳ್ಳು ಆಸ್ತಿ ಪ್ರಮಾಣ ಪತ್ರ!

ಬೆಂಗಳೂರು, ಏ.27- ಚುನಾವಣಾ ಆಯೋಗಕ್ಕೆ ಸುಳ್ಳು ಆಸ್ತಿ ಪ್ರಮಾಣ ಪತ್ರ ನೀಡಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪ್ರಗತಿಪರ ರೈತ ಮುನೇಗೌಡ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗಶೆಟ್ಟಿ ಹಳ್ಳಿ ಸಮೀಪ 2.6 ಎಕರೆ ಸರ್ಕಾರಿ ಜಮೀನನ್ನು ಹನುಮಂತೇಗೌಡ ಅತಿಕ್ರಮಿಸಿ ಈ ಜಾಗದಲ್ಲಿ ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಬಿಗ್ ಬಜಾರ್ ಕಂಪೆನಿಗೆ ಬಾಡಿಗೆ ನೀಡಿದ್ದಾರೆ. ಈ ಆಸ್ತಿಯ ಮೇಲೆ ಬ್ಯಾಂಕ್‍ನಿಂದ 8.90 ಕೋಟಿ ಸಾಲ ಪಡೆದಿದ್ದಾರೆ. ಪ್ರತಿ ತಿಂಗಳು ಬಿಗ್ ಬಜಾರ್ ಕಂಪೆನಿಯಿಂದ 20 ಲಕ್ಷ ರೂ. ಬಾಡಿಗೆ ಪqಯುತ್ತಿದ್ದಾರೆ. ಆದರೆ ಈ ಯಾವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಆಸ್ತಿ ಪ್ರಮಾಣ ಪತ್ರದಲ್ಲಿ ನೀಡಿಲ್ಲ ಎಂದು ಆರೋಪಿಸಿದರು.

ಹನುಮಂತೇಗೌಡರಿಗೆ ಸಂಬಂಧಿಸಿದ ಕೆಲವು ಆಸ್ತಿ ವಿವರಣೆ ಮಾತ್ರ ಅಧಿಕೃತವಾಗಿ ದೊರೆತಿದೆ. ಆದರೆ ಇವರು ಇನ್ನು ಕೋಟ್ಯಂತರ ರೂ. ಆಸ್ತಿ ಒqಯರಾಗಿದ್ದಾರೆ. ಹಾಗಾಗಿ ಇದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಇವರ ನಾಮಪತ್ರ ರದ್ದುಪಡಿಸಬೇಕು. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಆಸ್ತಿ ವಿವರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮುನೇಗೌಡ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ