ಕೊಪ್ಪಳ : ಏ-೨೭; ಕೊಪ್ಪಳದ ಗವಿಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಭೇಟಿ ನೀಡಿ, ಗವಿಸಿದ್ದೇಶ್ವರನ ದರ್ಶನ ಪಡೆದರು.
ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಮಠದ ಮಕ್ಕಳು ಹೂ ಗುಚ್ಛ ನೀಡೋ ಮೂಲಕ ಸ್ವಾಗತಿಸಿದರು.
ಗವಿಸಿದ್ದೇಶ್ವರನ ಗದ್ದುಗೆ ದರ್ಶನ ಪಡೆದ ಅಮಿತ್ ಶಾ, ಬಳಿಕ ಗವಿಶ್ರೀಗಳನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಸಂಸದ ಕರಡಿ ಸಂಗಣ್ಣ, ಸಂತೋಷಜಿ, ಸಿ.ವಿ.ಚಂದ್ರಶೇಖರ ಉಪಸ್ಥಿತರಿದ್ದರು.
Koppala,gavimuth,BJP,Amith Shah