ಜೆಡಿಎಸ್ ಪಕ್ಷದ ಪ್ರಣಾಳಿಕೆ ಸಿದ್ಧವಾಗಿದ್ದು, ಮುಂದಿನ ವಾರದೊಳಗೆ ಬಿಡುಗಡೆ

ಬೆಂಗಳೂರು, ಏ.27-ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಪ್ರಣಾಳಿಕೆ ಸಿದ್ಧವಾಗಿದ್ದು, ಮುಂದಿನ ವಾರದೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ರೈತರು, ಬಡವರು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತಹ ಪ್ರಣಾಳಿPಯನ್ನು ಜೆಡಿಎಸ್ ಸಿದ್ಧಪಡಿಸಿದೆ. ಪ್ರಣಾಳಿPಯ ಬಹುತೇಕ ಮುಖ್ಯಾಂಶಗಳನ್ನು ಬಹಿರಂಗ ಸಮಾವೇಶಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿಯೇ ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿ 20 ತಿಂಗಳು ಜನ ಮೆಚ್ಚುವಂತೆ ಅಧಿಕಾರ ನಡೆಸಿದ್ದು, ವಿಧಾನಸಭೆ ಚುನಾವuಯಲ್ಲಿ ಜನರು ಆಶೀರ್ವಾದ ಮಾಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದಾಗ ಮಾಡಲಿರುವ ಯೋಜನೆ ಕಾರ್ಯಕ್ರಮಗಳ ಬಗ್ಗೆ ಚುನಾವಣಾ ಪ್ರಣಾಳಿPಯಲ್ಲಿ ಪ್ರಸ್ತಾಪಿಸಲಾಗಿದೆ.

ಅದರ ಮುಖ್ಯಾಂಶಗಳೆಂದರೆ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ರೈತರ ಮತ್ತು ಸ್ತ್ರೀಶಕ್ತಿ ಸಂಘಗಳು, ನೇಕಾರರು, ಮೀನುಗಾರರು, ಗ್ರಾಮೀಣ ಕುಶಲಕರ್ಮಿಗಳು ಮಾಡಿರುವ ಸಾಲ ಮನ್ನಾ ಮಾಡುವುದು, ಗ್ರಾಮೀಣ ಪ್ರದೇಶಗಳಲ್ಲಿ ವಾರವಿಡೀ ದಿನಪೂರ್ತಿ 3 ಫೇಸ್ ವಿದ್ಯುತ್ ಪೂರೈಕೆ, ಹಿಂದುಳಿದ ಮತ್ತು ಇತರೆ ವರ್ಗದವರಿಗೆ 2 ಲಕ್ಷದವರೆಗೂ ವಸತಿ ನಿರ್ಮಾಣ ಮಾಡುವ ಜೆ.ಪಿ.ಸದನ ಯೋಜ£ಯನ್ನು ಜಾರಿಗೆ ತರುವ ಭರವ¸ಯನ್ನು ಪ್ರಣಾಳಿPಯಲ್ಲಿ ನೀಡುವ ಸಾಧ್ಯತೆಗಳಿವೆ.

ಬಡತನರೇಖೆಗಿಂತ ಕೆಳಗಿರುವ ಕುಟುಂಬದವರಿಗೆ 3 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಸೇವೆ ನೀಡುವ ಎಚ್.ಡಿ.ದೇವೇಗೌಡ ಆರೋಗ್ಯಶ್ರೀ ಯೋಜನೆ, ಒಂದರಿಂದ ಹತ್ತನೇ ತರಗತಿಯವರೆಗೆ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಜಾರಿಗೆ ತರುವುದು, ಅಂಗನವಾಡಿ ಕಾರ್ಯಕರ್ತರ ಗೌರವ ಧನ 10 ಸಾವಿರಕ್ಕೆ ಹೆಚ್ಚಳ, ಕಾವೇರಿ ನದಿ ನೀರು ಹಾಗೂ ರೈತರ ರಕ್ಷಣೆಗಾಗಿ ಸದಾ ಹೋರಾಟ ಮಾಡುವುದು, ಮಹದಾಯಿ ಸಮಸ್ಯೆ ಬಗೆಹರಿಸುವುದು, ವಿಕಲಚೇತನರ ಮಾಸಾಶನ ಎರಡೂವರೆ ಸಾವಿರ ಮತ್ತು ವೃದ್ಧಾಪ್ಯ ಹಾಗೂ ವಿಧವಾ ವೇತನ 1500 ರೂ.ಗಳಿಗೆ ಹೆಚ್ಚಳ ಮಾಡುವ ಭರವ¸ಯನ್ನು ಪ್ರಣಾಳಿPಯಲ್ಲಿ ಸೇರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಜಾಗೃತಿ ದಳ ರಚನೆ, ನೀರಾವರಿ ಯೋಜನೆಗಳಿಗೆ 65 ಸಾವಿರ ಕೋಟಿ ಹಣ ಮೀಸಲು, ಎತ್ತಿನ ಹೊಳೆ ಯೋಜನೆ ಅನುಷ್ಠಾನ, ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಆರಂಭ, ಪರಿಸರಕ್ಕೆ ಹಾನಿಯಾಗುವ ಗಣಿಗಾರಿಕೆ ನಿಷೇಧ, ಗ್ರಾಮ ವಾಸ್ತವ್ಯ ಮುಂದುವರಿಕೆ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಸಾವಿರ ರೂ. ಮಾಸಾಶನ, ಕನ್ನಡಿಗರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿPಯಲ್ಲಿ ನೀಡಲಾಗುತ್ತದೆ.

ಸರ್ಕಾರಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ ಹೆಚ್ಚಳ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಶೀಘ್ರ ಅನುಷ್ಠಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಣಾಳಿPಯಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಣಾಳಿPಯ ಹಲವು ಮುಖ್ಯಾಂಶಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.

ಪ್ರಣಾಳಿಕೆ ಸಿದ್ಧಪಡಿಸಲು ಅನುಕೂಲವಾಗುವಂತೆ ರೈತರು, ಆಟೋಚಾಲಕರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ವರ್ಗದ ಜನರೊಂದಿಗೆ ಸಂವಾದ ನಡೆಸಿ ಅವರ ಅಪೇಕ್ಷೆ ಮತ್ತು ಸಲಹೆಗಳನ್ನು ಕ್ರೋಢೀಕರಿಸಿ ಪ್ರಣಾಳಿPಯನ್ನು ಸಿದ್ಧಪಡಿಸಲಾಗಿದೆ.

ಪ್ರಸಕ್ತ ವಿಧಾನಸಭೆ ಚುನಾವuಯಲ್ಲಿ ರಾಜ್ಯದ ಮತ್ತು ರೈತರ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಪ್ರಣಾಳಿPಯಲ್ಲಿ ಕೋರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ