ಒಂದು ಕೋಟಿ ಉದ್ಯೋಗ ಸೃಷ್ಟಿ, ಹತ್ತುಲಕ್ಷ ಮನೆಗಳ ನಿರ್ಮಾಣ, ಒಂದರಿಂದ 12ತರಗತಿವರೆಗೆ ಉಚಿತ ಶಿಕ್ಷಣ : ಕಾಂಗ್ರೆಸ್ ಪ್ರಣಾಳಿಕೆ

ಬೆಂಗಳೂರು, ಏ.27-ಕಾಂಗ್ರೆಸ್ ಪಕ್ಷ 2018ರ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಒಂದು ಕೋಟಿ ಉದ್ಯೋಗ ಸೃಷ್ಟಿ, ಹತ್ತುಲಕ್ಷ ಮನೆಗಳ ನಿರ್ಮಾಣ, ಒಂದರಿಂದ 12ತರಗತಿವರೆಗೆ ಉಚಿತ ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ಆದ್ಯತೆ, ವಿದ್ಯುತ್ ಸ್ವಾವಲಂಬನೆ ಸೇರಿದಂತೆ ಅನೇಕ ಮಹತ್ವದ ಭರವಸೆಗಳನ್ನು ನೀಡಿದೆ.

ಸಂಸದ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಪ್ರಣಾಳಿಕಾ ಸಮಿತಿ ರಚಿಸಿದ ಪ್ರಣಾಳಿPಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಮಂಗಳೂರಿನಲ್ಲಿಂದು ಬಿಡುಗಡೆ ಮಾಡಿದರು.

ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಭರವಸೆಗಳ ಮಹಾಪೂರವನ್ನೇ ಕಾಂಗ್ರೆಸ್ ಈ ಪ್ರಣಾಳಿPಯ ಮೂಲಕ ನೀಡಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೂಡ ಅನಾವರಣ ಮಾಡಿದೆ. ಈ ಬಾರಿ ಪ್ರಣಾಳಿPಯಲ್ಲಿ ಜನಪ್ರಿಯ ಯೋಜನೆಗಳಿಗಿಂತ ಜನಪರ ಯೋಜನೆಗಳಿಗೆ ಕಾಂಗ್ರೆಸ್ ಹೆಚ್ಚು ಒತ್ತು ಕೊಟ್ಟಿದೆ.

ಸಾಮಾಜಿಕ ನ್ಯಾಯದ ಆದ್ಯvಯನ್ನು ಮುಂದುವರೆಸಿದೆ. ವಿದ್ಯುತ್ ಸ್ವಾವಲಂಬನೆಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಪಕ್ಷ ಶೇ.100ರಷ್ಟು ವಿದ್ಯುತ್ ನೀಡುವ ಭರವಸೆ ನೀಡಿದೆ. ಕುಟುಂಬಗಳ ಸಂಪೂರ್ಣ ವಿದ್ಯುದೀಕರಣವನ್ನು ಖಚಿತಪಡಿಸಿದೆ.

ಸೌರವಿದ್ಯುತ್, ಗಾಳಿ, ಜಿಯೋ ಥರ್ಮಲ್, ಹೈಡ್ರೋಎಲೆಕ್ಟ್ರಿಕಲ್, ಜೈವಿಕ ತ್ಯಾಜ್ಯ, ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಗೆ ಶೇ.100 ಮೀಟರ್ ಅಳವಡಿPಯನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ.

ಮಹಾನ್ ಪ್ರಗತಿಗೆ ಉತ್ತಮ ಆಡಳಿತದತ್ತ ದಿಟ್ಟ ಹೆಜ್ಜೆ ಇಟ್ಟಿರುವ ಪಕ್ಷವು, ಭ್ರಷ್ಟಾಚಾರ ಕಡಿಮೆ ಮಾಡಲು ಆಡಳಿತ ಸೇವೆ ಸುಧಾರಿಸಲು ಮುಂದಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಇ-ಆಡಳಿತ ಯಾಂತ್ರಿಕತೆಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಆರೋಗ್ಯ ಭಾಗ್ಯ ಯೋಜನೆ ಸಾಮಾನ್ಯ ಜನರ ಆಶೋತ್ತರಗಳಿಗೆ ಒಂದು ವರವಾಗಿದ್ದು, ಸುಮಾರು 1.3 ಕೋಟಿ ಕುಟುಂಬಗಳನ್ನು ಒಳಗೊಳ್ಳಲಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಒದಗಿಸುವ ಯೂನಿರ್ವಸಲ್ ಚಿಕಿತ್ಸೆಯನ್ನು ಒದಗಿಸುತ್ತದೆ.

ಹೂಡಿಕೆ ಕರ್ನಾಟಕ ಫೆÇೀರಂ ಅಡಿ ಆರ್ಥಿಕ ಅಭಿವೃದ್ಧಿ ಬೋರ್ಡ್ ಸಿಂಗಪೂರ್ ಸಹಾಯದೊಂದಿಗೆ ಸ್ಥಾಪಿಸಿ ಬ್ರಾಂಡ್ ಕರ್ನಾಟಕವನ್ನು ಪೆÇ್ರೀ ಜಾಗತಿಕವಾಗಿ ಹೂಡಿಕೆ ಆಹ್ವಾನಿಸುವುದು ಪ್ರಣಾಳಿPಯ ಪ್ರಮುಖ ಅಂಶವಾಗಿದೆ.

ಬೆಂಗಳೂರಿನಲ್ಲಿ ಪೇಟೆಂಟ್ ಕಚೇರಿ ಸ್ಥಾಪನೆ, ಶಿಡ್ಲಘಟ್ಟ , ಚಿಕ್ಕಬಳ್ಳಾಪುರದಲ್ಲಿ ಹಾರ್ಡ್‍ವೇರ್ ಪಾರ್ಕ್‍ಗಳ ರಚನೆ, ದೇವನಹಳ್ಳಿಯಲ್ಲಿ ಐಟಿ ಪಾರ್ಕ್ ರಚನೆ, ದೇವನಹಳ್ಳಿಯನ್ನು ವಿಮಾನ ನಿಲ್ದಾಣ ಕೇಂದ್ರವನ್ನಾಗಿಸಲು ಹೆಚ್ಚಿನ ಪೆÇ್ರೀ ಡಿಜಿಟಲ್ ಪ್ರತಿಭೆ ಹೆಚ್ಚಿಸಲು ವಿವಿಧ ಕಾರ್ಯಕ್ರಮ, ಬೆಂಗಳೂರು ಉದ್ಯಮಶೀಲತಾ ರಾಜ್ಯವಾಗಿ ಒಂದು ಪ್ರದರ್ಶಕ ಸ್ಥಳ. ವಿದ್ಯುತ್ ಚಾಲಿತ ವಾಹನಗಳಿಗಾಗಿ ಪೆÇ್ರೀ ಕೇಂದ್ರಗಳನ್ನು ಮತ್ತು ಸ್ಟಾರ್ಟ್‍ಅಪ್‍ಗಳ ಪೆÇ್ರೀ ಐಟಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಒಟ್ಟು ವಹಿವಾಟಿನ ಶೇ.33ರಷ್ಟು ಕೊಡುಗೆ ನೀಡಲು ವಿಸ್ತರಣೆ, ಐಟಿ ಕೊಡುUಯನ್ನು ಈಗಿನ 60ಬಿಎಂ ಯುಎಸ್ ಡಾಲರ್‍ನಿಂದ 300 ಬಿಲಿಯನ್ ಡಾಲರ್‍ಗೆ ಏರಿಕೆ ಮಾಡುವಿಕೆ, ಕಂಪೆನಿಗಳು ಉತ್ಪಾದನೆ ಪ್ರಾರಂಭಿಸಲು ಸುಮಾರು 1 ಕೋಟಿ ಮೊತ್ತದ ಸ್ಟಾರ್ಟ್‍ಅಪ್ ಸಬ್ಸಿಡಿ, ದೇವನಹಳ್ಳಿಯಲ್ಲಿ ಏರೋಸ್ಪೇಸ್ ಹಬ್ ಸ್ಥಾಪಿಸಲು ಹೆಚ್ಚಿನ ಆದ್ಯತೆ, ಸರ್ಕಾರದಿಂದ ಬಿ.ಟಿ.ಸಂಸ್ಥೆಗಳನ್ನು ಪ್ರಾರಂಭಿಸಲು ವಿಶೇಷ ಧನಸಹಾಯ, ಎಲ್ಲಾ ಗ್ರಾಮಗಳಿಗೂ ರಸ್ತೆ, ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ಹಾಗು ಏರ್‍ಸ್ಟ್ರಿಪ್ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯಕ್ಕಾಗಿ ಆತಂರಿಕ ಬಂದರು ಪ್ರಾಧಿಕಾರ ರಚನೆ, ಮಂಗಳೂರು-ಹುಬ್ಬಳ್ಳಿ ನಡುವೆ ವಾಯುಯಾನ ಸಂಪರ್ಕ ಪ್ರಾರಂಭ.

ಶಿರಾಡಿಘಾಟ್‍ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಮೈಸೂರು, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಕಲಬುರಗಿ, ಮಂಗಳೂರು ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್, ಎರಡನೇ ದರ್ಜೆ ನಗರಗಳಿಗೆ ಅನಿಲ ಕೊಳವೆ ಬಾವಿ ಹೊಂದಲು ಮೂಲಸೌಕರ್ಯ ಒದಗಿಸುವುದು ಆದ್ಯತೆಗಳಲ್ಲಿ ಒಂದಾಗಿದೆ.
ನೀರಾವರಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮನೆ ಮನೆ , ಹೊಲ ಹೊಲಕ್ಕೆ ನೀರು ಎಂಬ ಯೋಜನೆ ರೂಪಿಸಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಬೆಂಗಳೂರಿನಲ್ಲಿರುವ 192 ಕೆರೆಗಳನ್ನು ಪುನಶ್ಚೇತನಗೊಳಿಸುವುದು, ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನದಿ ಪಾತ್ರದಲ್ಲಿ ನಿಗದಿತವಾಗಿರುವ ಹೆಚ್ಚುವರಿ 15 ಟಿಎಂಸಿ ನೀರು ಬಳಸಿಕೊಳ್ಳಲು ನೀಲನಕ್ಷೆ ತಯಾರಿಸುವುದು.

ಪ್ರತಿ ಗ್ರಾ.ಪಂ.ನಲ್ಲಿ ಒಂದು ಸ್ಮಾರ್ಟ್ ಗ್ರಾಮದ ಅಭಿವೃದ್ಧಿ,ಗ್ರಾ.ಪಂ. ಗಣಕೀಕರಣ, ಒಂದರಿಂದ 12 ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ, ಶಾಲೆ ಬಿಟ್ಟ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣದ ಭರವಸೆ ನೀಡಿದೆ.

ಮಹಿ¼ಯರಿಗೆ ಭರ್ಜರಿ ಕೊಡುಗೆ ನೀಡಿದ್ದು, ಸ್ಯಾನಿಟರಿ ಪ್ಯಾಡ್‍ಗಳ ತೆರಿಗೆ ತೆಗೆದುಹಾಕುವುದು, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿ¼ಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಭರವಸೆ ನೀಡಿದೆ.

ಆರ್‍ಟಿಐ ಪೂರ್ಣ ಅನುಷ್ಠಾನ, ಹೆಚ್ಚಿನ ಸೇವೆಗಳಿಗಾಗಿ ಸಕಾಲದಡಿಯಲ್ಲಿ ಸಮಯಾಧಾರಿತ ಸೇವೆಗಳನ್ನು ಖಚಿತಪಡಿಸುವುದು, ಏಕಗವಾಕ್ಷಿ ಯೋಜ£ಯಡಿ ಎಲ್ಲಾ ಸರ್ಕಾರಿ ಕೆಲಸಗಳು, ಶಿಕ್ಷಣದ ಗುಣಮಟ್ಟ ಹೆಚ್ಚಳ, ಶಾ¯ಯಲ್ಲಿ ಯೋಗ ಕಡ್ಡಾಯವಾಗಿ ಕಲಿಸುವುದು, ದೇಶೀಯ ಆಟಗಳಾದ ಕಬಡ್ಡಿ, ಖೋ-ಖೋ ಇತ್ಯಾದಿಗಳ ಅಕಾಡೆಮಿಗಳ ಪ್ರಾರಂಭ.

ಬೆಂಗಳೂರಿನಲ್ಲಿ ಕನಿಷ್ಠ 10 ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ, ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ, ಕನ್ನಡ ಭಾµಯ ಭವ್ಯತೆ, ಶ್ರೀಮಂತಿಕೆ ಭವ್ಯvಯನ್ನು ಸಾರುವಂತೆ ಪ್ರೇರಣೆ ನೀಡುವುದು, ಸಾಹಿತ್ಯ ಭಾಷಾ ಪ್ರಾಧಿಕಾರದ ರಚನೆ, ಪದವಿ ಪೂರ್ವ ಶಿಕ್ಷಣ ಇಲಾSಯ 2034 ಸಹಾಯಕ ಪೆÇ್ರಫೆಸರ್ ಹುದ್ದೆಗಳ ನೇಮಕ, ಹೊಸ ಸಾವಯವ ಕೃಷಿ ಇಲಾಖೆ ಸ್ಥಾಪನೆ, ರೇಷ್ಮೆ ನೂಲುಗಾರರ ಆದಾಯ ದ್ವಿಗುಣಗೊಳಿಸುವುದು, ಪಶುಸಂಗೋಪನೆ ವಲಯಕ್ಕೆ ಪೆÇ್ರೀ ರೈತರ ಆದಾಯ ದ್ವಿಗುಣಗೊಳಿಸುವುದು, ರೈತರಿಗೆ ದಿನದ 24 ಗಂಟೆ ವಿದ್ಯುತ್ ಒದಗಿಸುವುದು, ಸೋನಾ ಮಸೂರಿ ಸಂಶೋಧನಾ ಕೇಂದ್ರ ರಾಯಚೂರಿನಲ್ಲಿ ಸ್ಥಾಪನೆ, ಮಾರುಕಟ್ಟೆ ಕೇಂದ್ರವನ್ನು ಕೊಪ್ಪಳ, ಗಂಗಾವತಿ ಮತ್ತು ಕುಷ್ಟಗಿಗಳಲ್ಲಿ ಸ್ಥಾಪಿಸುವುದು ಸೇರಿದಂತೆ ಹಲವು ಪ್ರಗತಿಗೆ ಪೂರಕವಾದ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಜನರಿಗೆ ನೀಡುವ ಮೂಲಕ ವಿಧಾನಸ¨sಯಲ್ಲಿ ಜನಾದೇಶವನ್ನು ಬೇಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ