ನಾಮಪತ್ರಗಳನ್ನು ವಾಪಸ್ ಪಡೆಯುವ ಅವಧಿ ಇಂದು ಮುಕ್ತಾಯ

ಬೆಂಗಳೂರು, ಏ.27-ರಾಜ್ಯ ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ವಾಪಸ್ ಪಡೆಯುವ ಅವಧಿ ಇಂದು ಮುಕ್ತಾಯಗೊಂಡಿದ್ದು, ಟಿಕೆಟ್ ವಂಚಿತ ಬಂಡಾಯವೆದ್ದಿದ್ದ ಸ್ಪರ್ಧಾಕಾಂಕ್ಷಿಗಳ ಮನವೊಲಿಸುವ ಪ್ರಯತ್ನಕ್ಕೂ ತೆರೆ ಬಿದ್ದಿತು.

ಏ.17 ರಿಂದ 24ರವರೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ವಾಪಸ್ ಪqಯಲು ಇಂದಿನವರೆಗೆ ಭಾರತದ ಚುನಾವಣಾ ಆಯೋಗ ಅವಕಾಶ ನೀಡಿತ್ತು. ಕೊನೆ ಕ್ಷಣದವರೆಗೂ ರಾಜಕೀಯ ಪಕ್ಷಗಳ ನಾಯಕರು ಬಂಡಾಯಗಾರರ ಮನವೊಲಿಸುವ ಪ್ರಯತ್ನವನ್ನು ಮಾಡಿದರು.

ನಾಮಪತ್ರಗಳ ಪರಿಶೀಲ£ಯೂ ಮುಗಿದಿದ್ದು, 224 ಕ್ಷೇತ್ರಗಳಲ್ಲಿ ಸುಮಾರು 3,226 ಅಭ್ಯರ್ಥಿಗಳಿದ್ದಾರೆ. ಸುಮಾರು 227 ನಾಮಪತ್ರಗಳು ತಿರಸ್ಕøತಗೊಂಡಿವೆ. ಮುಳಬಾಗಿಲಿನಲ್ಲಿ ಗರಿಷ್ಠ 56 ಮಂದಿ ನಾಮಪತ್ರ ಸಲ್ಲಿಸಿದ್ದರೆ, ಚಳ್ಳಕೆgಯಲ್ಲಿ ಕನಿಷ್ಠ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಆಯೋಗ ಪ್ರಕಟಿಸಲಿದೆ. ಇಂದಿನಿಂದಲೇ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಮತದಾರರನ್ನು ಸೆ¼ಯಲು ತೀವ್ರ ಪೈಪೆÇೀಟಿ ಏರ್ಪಡಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಅಲ್ಲದೆ, ಆಯಾ ಪಕ್ಷದ ನಾಯಕರು, ಮುಖಂಡರು ಬಿರುಸಿನ ಪ್ರಚಾರದಲ್ಲಿ ನಿತರವಾಗುವುದರಿಂದ ಚುನಾವಣಾ ಕಣ ರಂಗೇರಲಿದೆ.

ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಹೊಂದಿದ್ದು, ತಮ್ಮದೇ ಆದ ರೀತಿಯಲ್ಲಿ ತಂತ್ರ-ಪ್ರತಿತಂತ್ರ ರೂಪಿಸಿ ಮತದಾರರ ಓಲೈPಯ ಕಸರತ್ತು ಮಾಡುತ್ತಿದ್ದಾರೆ. ನಾಳೆಯಿಂದ ರಾಜ್ಯ ವಿಧಾನಸಭೆ ಚುನಾವಣೆ ಕಾವೇರತೊಡಗಲಿದೆ.

ಈಗಾಗಲೇ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಪ್ರಾರಂಭವಾಗಿದೆ. ಬೇಸಿUಯ ಸುಡುಬಿಸಿಲಿನಲ್ಲೂ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ