ಕೇಂದ್ರ ಕಾರಾಗೃಹದ ಮೇಲೆ ಪೆÇಲೀಸರು ದಿಢೀರ್ ದಾಳಿ!

ಕಲ್ಬುರ್ಗಿ, ಏ.26- ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ಪೆÇಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಎಸ್ಪಿ ಎನ್.ಶಶಿಕುಮಾರ್ ಮತ್ತು ಎಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಳೆದ ರಾತ್ರಿ ಜೈಲಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸೆಲ್‍ಗಳನ್ನು ಪರಿಶೀಲಿಸಿದ್ದಾರೆ.
ಗಾಂಜಾ ಸೇರಿದಂತೆ ಮೊಬೈಲ್ ಫೆÇೀನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಜೈಲಿನಲ್ಲಿರುವ ಕೆಲ ಖೈದಿಗಳು ಮೊಬೈಲ್ ಮೂಲಕ ಹೊರಗಡೆ ಇರುವ ತಮ್ಮ ಸಹಚರರಿಗೆ ಅಭ್ಯರ್ಥಿಗಳು ಹಾಗೂ ಕೆಲವರಿಗೆ ಧಮ್ಕಿ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ