ಚಾಮುಂಡಿ ಬೆಟ್ಟದ ಮೇಲೆ ನಿಮ್ಮ ಮತ ನಿಮ್ಮ ಹಕ್ಕು:

ಮೈಸೂರು, ಏ.26- ಒಂದಲ್ಲಾ ಒಂದು ರೀತಿಯಲ್ಲಿ ಖ್ಯಾತಿ ಗಳಿಸಿರುವ ಮೈಸೂರು ಮತದಾನದ ಬಗ್ಗೆಯೂ ಜನತೆಯಲ್ಲಿ ಅರಿವು ಮೂಡಿಸಲು ವಿಶಿಷ್ಟ ವಿಧಾನ ಅನುಸರಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ.
ಮೈಸೂರು ಸಮೀಪದ ಚಾಮುಂಡಿಬೆಟ್ಟದ ಮೇಲೆ ದಸರಾ ಸಂದರ್ಭದಲ್ಲಿ ಸುಸ್ವಾಗತ ಎಂದು ದೀಪಗಳಿಂದ ಜೋಡಿಸಲಾಗುತ್ತದೆ. ಅದೇ ರೀತಿ ಚುನಾವಣಾ ಸಂದರ್ಭದಲ್ಲಿ ಜಿಲ್ಲಾಡಳಿತ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹೊಸ ಪ್ರಯತ್ನ ನಡೆಸಿದೆ.
ಚಾಮುಂಡಿ ಬೆಟ್ಟದ ಮೇಲೆ ನಿಮ್ಮ ಮತ ನಿಮ್ಮ ಹಕ್ಕು ಎಂದು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರಿಕನು ಚುನಾವಣೆಯಲ್ಲಿ ತಮ್ಮ ಮತದಾನವನ್ನು ಕಡ್ಡಾಯವಾಗಿ ಮಾಡಬೇಕೆಂಬ ಸಂದೇಶವನ್ನು ನೀಡಲಾಗಿದೆ.
ರಾತ್ರಿ ಈ ದೀಪಾಲಂಕಾರವನ್ನು ಅನಾವರಣಗೊಳಿಸಲಾಗಿದ್ದು , ಚುನಾವಣೆ ಮುಗಿಯುವವರೆಗೂ ಅಂದರೆ ಮೇ 12ರವರೆಗೂ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 10ರವರೆಗೂ ದೀಪವನ್ನು ಹಾಕಲಾಗುತ್ತದೆ.
ಮೈಸೂರಿನಾದ್ಯಂತ ಜನರು ನೋಡಬಹುದಾಗಿದ್ದು , ಈ ಮೂಲಕ ಪ್ರತಿಯೊಬ್ಬರು ಮತದಾನ ಮಾಡಬೇಕೆಂದು ಸಂದೇಶ ಸಾರಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ