ವಿಶ್ವದ ಸಾಲ ಸರ್ವಕಾಲಿಕ ದಾಖಲೆಯ 164 ಲಕ್ಷ ಕೋಟಿ ಡಾಲರ್‍ಗಳಿಗೆ ಏರಿಕೆ: ಐಎಂಎಫ್ ವಿಷಾದ

ನವದೆಹಲಿ, ಏ.21-ವಿಶ್ವದ ಸಾಲ ಸರ್ವಕಾಲಿಕ ದಾಖಲೆಯ 164 ಲಕ್ಷ ಕೋಟಿ ಡಾಲರ್‍ಗಳಿಗೆ ಏರಿಕೆಯಾಗಿದ್ದು, ಮತ್ತೊಂದು ಆರ್ಥಿಕ ಹಿನ್ನಡೆ ಆತಂಕ ಎದುರಾಗಿದೆ. ಈ ಸಂಗತಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಿಷಾದದಿಂದ ತಿಳಿಸಿದೆ.
ಜಾಗತಿಕ ಸಾಲ 164 ಲಕ್ಷ ಕೋಟಿ ಡಾಲರ್‍ಗಳಿಗೆ ಉಬ್ಬಿದೆ. ಇದು ಅತ್ಯಂತ ದೊಡ್ಡ ಸಾಲದ ಮೊತ್ತ. ಕಟ್ಟುನಿಟ್ಟಿನ ಆರ್ಥಿಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಆರ್ಥಿಕ ಹಿನ್ನಡೆ ಹಾಗೂ ಸಾಲ ಮರುಪಾವತಿ ವೇಳೆ ರಾಷ್ಟ್ರಗಳು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಐಎಂಎಫ್‍ನ ಆರ್ಥಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ವಿಟೋರ್ ಗ್ಯಾಸ್ಪರ್ ಎಚ್ಚರಿಕೆ ನೀಡಿದ್ದಾರೆ. ಸಾಲ ಮಾಡಿರುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಜಾಗತಿಕ ಹಣಕಾಸು ಬಿಕ್ಕಟ್ಟು ಉಂಟಾದ ನಂತರ ಖಾಸತಿ ಸಾಲದಲ್ಲಿ ಮೂರು ಪಟ್ಟು ಎತ್ತುವಳಿ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ