ಖಾಲಿ ಮನೆಯೊಂದರಲ್ಲಿ 40 ಜೀವಂತ ಬಾಂಬ್‍ಗಳು ಪತ್ತೆ:

ಹೌರಾ, ಏ.21-ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಂದ್ರಾಪುರ್‍ನ ಖಾಲಿ ಮನೆಯೊಂದರಲ್ಲಿ 40 ಜೀವಂತ ಬಾಂಬ್‍ಗಳು ಪತ್ತೆಯಾಗಿದ್ದು, ಕೆಲ ಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಖಚಿತ ಸುಳಿವಿನ ಮೇರೆಗೆ ನಿನ್ನೆ ತಡ ರಾತ್ರಿ ಅಮ್ಟಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಲಿ ಮನೆಯೊಂದರ ಮೇಲೆ ಪೆÇಲೀಸರು ದಾಳಿ ನಡೆಸಿ 40 ಬಾಂಬ್‍ಗಳನ್ನು ವಶಪಡಿಸಿಕೊಂಡರು.
ಕೋಲ್ಕತಾದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಎಲ್ಲ 40 ಬಾಂಬ್‍ಗಳನ್ನು ತಟಸ್ಥಗೊಳಿಸಿದೆ. ಮನೆಯ ಮುಂದೆ ನಿಲ್ಲಿಸಲಾಗಿದ್ದ ಎರಡು ಮೋಟಾರ್‍ಬೈಕ್‍ಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಬಾಂಬ್‍ಗಳು ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಜನರು ಭಯಭೀತರಾದರು. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ