
ನವದೆಹಲಿ, ಏ.19-ದೇಶದಲ್ಲಿ ನಗದು ಅಭಾವ ಮತ್ತು ಎಟಿಎಂಗಳು ಖಾಲಿ ಖಾಲಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನ್ನ ಎಲ್ಲ ನಾಲ್ಕು ಮುದ್ರಣ ಘಟಕಗಳ ಮೂಲಕ 500 ಮತ್ತು 200 ರೂ.ಗಳ ನೋಟುಗಳ ಸಂಖ್ಯೆಯನ್ನು ಹೆಚ್ಚಿಸಿಲು ದಿನದ 24 ತಾಸುಗಳೂ ಕಾರ್ಯನಿರ್ವಹಿಸುತ್ತಿದೆ.
ದೇಶದಲ್ಲಿ ಸುಮಾರು 70,000 ಕೋಟಿ ರೂ.ಗಳ ಕರೆನ್ಸಿ ಕೊರತೆ ಉಂಟಾಗಿದೆ ಎಂಬ ವರದಿ ವರದಿಗಳ ಹಿನ್ನೆಲೆಯಲ್ಲಿ 500 ಮತ್ತು 200 ರೂ. ನೋಟುಗಳ ತೀವ್ರ ಅಭಾವದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.