ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪ ನಾಮಪತ್ರ ಸಲ್ಲಿಕೆ

ಶಿಕಾರಿಪುರ:ಏ-19: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಶಿಕಾರಿಪುರ ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 1.25ಕ್ಕೆ ಚುನಾವಣಾಧಿಕಾರಿ ಅವರಿಗೆ ಯಡಿಯೂರಪ್ಪ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಯಡಿಯೂರಪ್ಪ ತಮ್ಮ ಇಷ್ಟದೈವ ಉಚ್ಚಂಗಿ ಸ್ವಾಮಿಯ ದರ್ಶನಾಶೀರ್ವಾದಗಳನ್ನು ಪಡೆದರು. ದೇವಸ್ಥಾನದಿಂದ ಸಂತೆ ಮೈದಾನದ ವರೆಗೆ ರೋಡ್ ಶೋ ನಡೆಸಿ ಸಾರ್ವಜನಿಕರಲ್ಲಿ ಮತಯಾಚಿಸಿದರು.

ಹೊಸ ಸಂತೆ ಮೈದಾನದಲ್ಲಿ ಮಾನ್ಯ ಯಡಿಯೂರಪ್ಪನವರು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ನೀವು ಆರಿಸುತ್ತಿರುವುದು ಕೇವಲ ಒಬ್ಬ ಬಿಜೆಪಿ ಶಾಸಕನನ್ನಲ್ಲ. ಆದರೆ ರಾಜ್ಯದ ಭಾವಿ ಮುಖ್ಯಮಂತ್ರಿಯನ್ನು ಎಂದು ಹೇಳಿದರು. ಅವರ ಭಾಷಣಕ್ಕೆ ಸಾರ್ವಜನಿಕರು ಕರತಾಡನಗಳ ಮೂಲಕ ಬೆಂಬಲ ಸೂಚಿಸಿದರು.

ನಂತರ ಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಶ್ರೀರಾಮುಲು,ಶಾಸಕ ಬಿ.ವೈ. ರಾಘವೇಂದ್ರ ಮುಂತಾದವರು ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಜೊತೆಗಿದ್ದರು.

Karnataka Election,BS Yeddyurappa,File Nomination,Shikaripura

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ