
ರಾಯಚೂರು: ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಮತ್ತು ಅವರ ಪತಿ ಎಸಿಬಿ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಮಸ್ಕಿಯ ಮಲ್ಲದಗುಡ್ಡ ಗ್ರಾಮ ಪಂಚಾಯತ್ ಪಿಡಿಒ ವಸಂತ ಗೀತಾ ಮತ್ತು ಪತಿ ವಿಜಯಕುಮಾರ್ ಎಸಿಬಿ ಬಲೆಗೆ ಬಿದ್ದ ಆರೋಪಿಗಳು.
ಅದಣೆ ಗ್ರಾಮದ ಅಮರಣೆಶ ದೊಣ್ಣೆ ಮರಡಿ ಅವರಿಗೆ ಆಸ್ತಿ ಖಾತೆ ಬದಲಾವಣೆ ಮಾಡಿಕೊಡಲು ೫೦ ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ ಈ ಕುರಿತು ಅಮರೇಶ ದೊಣ್ಣೆ ಮರಡಿ ಅವರು ಎಸಿಬಿಗೆ ದೂರು ನೀಡಿದ್ದಾರೆ.
ಪತಿ ವಿಜಯಕುಮಾರ್ ಅಂಗಡಿಯಲ್ಲಿ ಅಡ್ವಾನ್ಸ್ ೨೫ ಸಾವಿರ ರೂ. ಪಡೆಯುತ್ತಿದ್ದ ವೇಳೆ ಎಸಿಬಿ ಅರುಣ್ ಕುಮಾರ್ ನೇತೃತ್ವ ತಂಡ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.