ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಟಿಕೆಟ್ ನೀಡುವ ಸಲುವಾಗಿ ಹೈಕಮಾಂಡ್ಗೆ ಒಂದು ದಿನದ ಗಡುವು ನೀಡಿದ್ದಾರೆ

ಹೈಕಮಾಂಡ್ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಇಡುವ ಕೆಲಸ ಮಾಡ್ತಾ ಇದೆ. ಸಂಸದೆ ಶೋಭಾ ಕರಂದ್ಲಾಜೆಗೆ ಯಾಕೆ ಟಿಕೆಟ್ ನೀಡಿದ್ರಿ, ನನಗೆ ಯಾಕೆ ಟಿಕೆಟ್ ನೀಡಿಲ್ಲ. ನಮ್ಮ ನಾಯಕರು ಸ್ಪಷ್ಟನೆ ನೀಡಿ ನನಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಹೈಕಮಾಂಡ್ಗೆ ಗಡವು ನೀಡಿದ್ದಾರೆ.

ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಬಿ.ಶ್ರೀರಾಮುಲು ಹೊರೆತು ಪಡಿಸಿದ್ರೆ, ನಾವು ಯಾವ ಸಂಸದರಿಗೂ ಟಿಕೆಟ್ ನೀಡಲ್ಲ ಅಂತಾ ಹೇಳಿದ್ರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆ ಆದ್ರೆ ಇದೀಗ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದ್ದಾರೆ. ನನಗೆ ಯಾಕೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನ ಹೋರಹಾಕಿದ್ರು. ಇನ್ನು ಕೊಪ್ಪಳದ ಕ್ಷೇತ್ರದಲ್ಲಿ ಸರ್ವೇ ರಿಪೋರ್ಟ್ ಪ್ರಕಾರ ನನ್ನ ಗೆಲುವು ಶತಸಿದ್ದ ಸಿದ್ದ ಎನ್ನುವ ಅಂಶ ಕೂಡ ಹೈಕಮಾಂಡ್ ಗೆ ಗೊತ್ತಿಗೆ.ಆದ್ರೆ ಇದೀಗ ಈ ರೀತಿ ಮಾಡಿದ್ದು, ಸರಿಯಲ್ಲ ಎಂದ್ರು. ಇಂದು ಇಡೀ ದಿನ ನಾನು ಹೈಕಮಾಂಡ್ ಗೆ ಗಡುವು ನೀಡ್ತಾ ಇದ್ದೇನೆ. ತಕ್ಷಣ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಅಲ್ಲದೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ರು. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಇದ್ದಲ್ಲಿ ಕಾರ್ಯಕರ್ತರ ಜೊತೆ ಸಂಪರ್ಕ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು, ಇದುವರೆಗೂ ನಾನು ಜೆಡಿಎಸ್ ಪಕ್ಷದವರಿನ್ನಾಗಲಿ ಅಥವಾ ಬೇರೆ ಪಕ್ಷದ ನಾಯಕರ ಜೊತೆ ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷದ ಅನೇಕ ನಾಯಕರು ನನ್ನ ಜೊತೆ ಮಾತನಾಡಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದಾರೆ.ಆದ್ರೆ ಇದಕ್ಕೆ ಹೈಕಮಾಂಡ್ ಸೂಕ್ತ ಸ್ಪಷ್ಟನೆ ನೀಡಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ