72 ಕೆಜಿ ಗಾಂಜಾ ರೈಡ್!

ತುಮಕೂರು, ಏ.17- ಈಕೆ ನೋಡೋಕೆ ಮಳ್ಳಿ, ಆದರೆ ಈಯಮ್ಮನ ಮುಂದೆ 10 ಮಾರಿಮುತ್ತುಗಳನ್ನು ನಿವಾಳಿಸಿ ಬಿಸಾಡಬಹುದು. ನೋಡೋಕೆ ಸಭ್ಯಳಂತೆ ಇರುವ ಈ ಮಹಿಳೆ ಕಳೆದ ಹಲವಾರು ವರ್ಷಗಳಿಂದ ಯಾರಿಗೂ ತಿಳಿಯದಂತೆ ಗಾಂಜಾ ದಂಧೆ ನಡೆಸುತ್ತಿದ್ದಳು. ಪೆÇಲೀಸರು ಇವರ ಮನೆ ರೈಡ್ ಮಾಡಿದಾಗ ಸಿಕ್ಕಿದ್ದು ಬರೋಬ್ಬರಿ 72 ಕೆಜಿ ಗಾಂಜಾ ಎಂದರೆ ಈಕೆ ಇನ್ನೆಂತಹ ಖತರ್ನಾಕ್ ಮಹಿಳೆ ಇರಬಹುದು ನೀವೇ ಊಹಿಸಿ…
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಇಂದಿರಾನಗರ ನಿವಾಸಿ ಕಮಲಮ್ಮ (55) ಗಾಂಜಾ ದಂಧೆ ನಡೆಸುತ್ತಿದ್ದ ಮಹಿಳೆ.
ನೋಡೋಕೆ ಒಳ್ಳೆಯವಳಂತೆ ಇದ್ದ ಕಮಲಮ್ಮ ಏನು ವ್ಯವಹಾರ ನಡೆಸುತ್ತಿದ್ದಾಳೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಪದೇ ಪದೇ ಅವರ ಮನೆಗೆ ಆಂಧ್ರ, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳ ವ್ಯಕ್ತಿಗಳು ಬಂದು ಹೋಗುತ್ತಿದ್ದರು.
ನೆರೆಹೊರೆಯವರೊಂದಿಗೆ ಮಾಮೂಲು ಮಹಿಳೆಯಂತೆ ಇದ್ದ ಕಮಲಮ್ಮನ ಮನೆಗೆ ಏಕೆ ಇಷ್ಟೊಂದು ಜನ ಬಂದು ಹೋಗುತ್ತಾರೆ ಎಂಬ ಬಗ್ಗೆ ಗ್ರಾಮದಲ್ಲಿ ಗುಸುಗುಸು ಕೇಳಿಬರುತ್ತಿತ್ತು.
ಈ ಕುರಿತಂತೆ ಪೆÇಲೀಸ್ ಮಾಹಿತಿದಾರ ಜಿಲ್ಲಾ ಎಸ್‍ಪಿ ಡಾ.ದಿವ್ಯಾ ಗೋಪಿನಾಥ್ ಅವರಿಗೆ ಮಾಹಿತಿ ನೀಡಿದ್ದ. ಆತನ ಮಾಹಿತಿ ಮೇರೆಗೆ ಎಸ್‍ಪಿ ಅವರು ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ರಾಘವೇಂದ್ರ ಅವರಿಗೆ ಸೂಚನೆ ನೀಡಿ ತನಿಖೆ ನಡೆಸುವಂತೆ ಆದೇಶಿಸಿದ್ದರು.
ಕಾನ್ಸ್‍ಟೆಬಲ್‍ಗಳಾದ ಅಯೂಬ್‍ಖಾನ್, ಪರಮೇಶ್ವರ್, ನಾಗರಾಜ್, ಶಿವಶಂಕರ್ ಮತ್ತಿತರ ಪೆÇಲೀಸರ ತಂಡದೊಂದಿಗೆ ಹುಳಿಯಾರಿನಲ್ಲಿ ಬೀಡುಬಿಟ್ಟ ರಾಘವೇಂದ್ರ ಅವರು ಕಮಲಮ್ಮನ ಬಳಿಗೆ ಅಯೂಬ್‍ಖಾನ್ ಅವರನ್ನು ಮಾರುವೇಷದಲ್ಲಿ ಕಳುಹಿಸಿ ಆ ಮನೆಯಲ್ಲಿ ಗಾಂಜಾ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದರು.
ಕಮಲಮ್ಮ ಅವರ ನಿವಾಸದಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ದಿಢೀರ್ ದಾಳಿ ನಡೆಸಿದಾಗ 5 ಕೆಜಿ ಗಾಂಜಾ ಪೆÇಟ್ಟಣಗಳು ದೊರೆತಿವೆ.
ಐದು ಕೆಜಿ ಗಾಂಜಾ ದೊರೆಯಿತು. ಅದನ್ನು ವಶಪಡಿಸಿಕೊಂಡು ಹೋಗೋಣ ಎನ್ನುವಷ್ಟರಲ್ಲಿ ತನಿಖಾ ಚತುರ ಇನ್ಸ್‍ಪೆಕ್ಟರ್ ರಾಘವೇಂದ್ರ ಅವರಿಗೆ ಇನ್ನೇನೋ ಅನುಮಾನ ಬಂದು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾದರು.
ಪರಿಶೀಲನೆ ಸಂದರ್ಭದಲ್ಲಿ ಖತರ್ನಾಕ್ ಕಮಲಮ್ಮ ಮನೆಯ ಒಳಗೆ ನೀರಿನ ತೊಟ್ಟಿ ಕಟ್ಟಿಸಿ ಅದರಲ್ಲಿ ಸಿಂಟೆಕ್ಸ್ ಟ್ಯಾಂಕ್ ಇಟ್ಟು ಆ ಟ್ಯಾಂಕ್‍ನಲ್ಲಿ ಹಳದಿ ಚೀಲಗಳಲ್ಲಿ ಮೂಟೆಗಟ್ಟಲೆ ಗಾಂಜಾ ತುಂಬಿಟ್ಟಿದ್ದಳು.
ಒಂದೊಂದೇ ಚೀಲ ಹೊರತೆಗೆಯುತ್ತಿದ್ದ ಪೆÇಲೀಸರಿಗೆ ಗಾಬರಿಯೋ ಗಾಬರಿ. ಆ ತೊಟ್ಟಿಯಲ್ಲಿದ್ದದ್ದು ಬರೋಬ್ಬರಿ 72 ಕೆಜಿ ಗಾಂಜಾ..!
ಎಲ್ಲಿಂದ ಸರಬರಾಜು: ಕಳೆದ ಹಲವಾರು ವರ್ಷಗಳಿಂದ ಗಾಂಜಾ ಸರಬರಾಜು ದಂಧೆಯಲ್ಲಿ ತೊಡಗಿಸಿಕೊಂಡಿರುವ ಕಮಲಮ್ಮ ಇಡೀ ಜಿಲ್ಲೆಗೆ ಗಾಂಜಾ ಸರಬರಾಜು ಮಾಡುವ ಡಿಸ್ಟ್ರಿಬ್ಯೂಟರ್ ಹೊಂದಿದ್ದಳು.
ನೆರೆಯ ಆಂಧ್ರ ಪ್ರದೇಶದಿಂದ ಮೂಟೆಗಟ್ಟಲೆ ಗಾಂಜಾ ತರಿಸಿಕೊಂಡು ತನ್ನ ಮನೆಯ ತೊಟ್ಟಿಯಲ್ಲೇ ಬಚ್ಚಿಟ್ಟುಕೊಂಡು ಅಕ್ಕಪಕ್ಕದವರಿಗೆ ಅನುಮಾನ ಬಾರದಂತೆ ಗಾಂಜಾ ಸರಬರಾಜು ವ್ಯವಹಾರ ನಡೆಸುತ್ತಿದ್ದಳು ಎನ್ನುವುದು ಪೆÇಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಶಹಬಾಷ್‍ಗಿರಿ: ನೋಡೋಕೆ ಗೃಹಿಣಿಯಂತೆ ಸೋಗು ಹಾಕಿ ಕಳೆದ ಹಲವಾರು ವರ್ಷಗಳಿಂದ ಯಾರಿಗೂ ತಿಳಿಯದಂತೆ ಗಾಂಜಾ ದಂಧೆ ನಡೆಸುತ್ತಿದ್ದ ಕಮಲಮ್ಮನ ಬಣ್ಣ ಬಯಲು ಮಾಡಿರುವ ಇನ್ಸ್‍ಪೆಕ್ಟರ್ ರಾಘವೇಂದ್ರ ಮತ್ತವರ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ನಮ್ಮ ಪೆÇಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಸಾಮಾನ್ಯ ಮಹಿಳೆಯೊಬ್ಬಳು ಇಂತಹ ದಂಧೆ ನಡೆಸಲು ಸಾಧ್ಯವಿಲ್ಲ. ಇವಳ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕರಾಳ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚುವಂತೆ ಪೆÇಲೀಸರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ದಯಾನಂದ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ