ಬೆಂಗಳೂರು,ಏ.16- ಎಲ್ಲಾ ರಾಜಕೀಯ ಪಕ್ಷಗಳು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ನೀತಿ ಜಾರಿಗೊಳಿಸಬೇಕೆಂದು ಹೋರಾಟಗಾರ ಹಾಗೂ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್ ಆಗ್ರಹಿಸಿದ್ದಾರೆ.
ಕನ್ನಡ ಅನುಷ್ಠಾನ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಆಧಾರದಲ್ಲಿ ರಚನೆಗೊಂಡಿರುವ ಕರ್ನಾಟಕ ರಾಜ್ಯ ತನ್ನದೇ ಆದ ಸ್ಥಳೀಯ ಕಾನೂನು ಅದರ ಅನುಷ್ಠಾನಕ್ಕೆ ಬದ್ಧವಾಗಿರುತ್ತದೆ. ಅದರ ಆಧಾರದಲ್ಲಿ ರಚನೆಗೊಳ್ಳುವ ಸರ್ಕಾರಗಳು ತನ್ನ ಪ್ರಣಾಳಿಕೆಯಲ್ಲಿ ಕನ್ನಡ ನೀತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ ಎಲ್ಲಾ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಕನ್ನಡದ ಅನುಷ್ಠಾನ ಕುರಿತಾದ ಕಾರ್ಯಪಡೆ ರಚನೆ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಖಾಯಂ ಸಿಬ್ಬಂದಿ ನೇಮಕ ಮಾಡಲು ವಿವಿಧ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕನ್ನಡದ ಸಾಧಕ-ಬಾಧಕಗಳನ್ನು ನಿವಾರಿಸಲು ಕನ್ನಡ ನಿರ್ದೇಶನಾಲಯದ ಅವಶ್ಯಕತೆ ಇದೆ.
ಅಲ್ಲದೆ, ಕನ್ನಡ ಮತ್ತು ಸಾಂಸ್ಕøತಿ ಇಲಾಖೆ ಕೇವಲ ಸಾಂಸ್ಕøತಿಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕನ್ನಡ ಅಭಿವೃದ್ಧಿಗಾಗಿ ಕನ್ನಡ ನೀತಿ ಅವಶ್ಯಕ ಎಂದಿದ್ದಾರೆ.