ಗೋಲ್ಟ್ ಕೋಸ್ಟ್, ಏ.14-ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 10 ದಿನ ಭಾರತ ಹೆಮ್ಮೆಪಡುವಂಥ ಸಾಧನೆಗೆ ಸಾಕ್ಷಿಯಾಗಿದೆ. ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 58 ವರ್ಷಗಳ ಬಳಿಕ ಈ ಕ್ರೀಡೆಯಲ್ಲಿ ಭಾರತ ಗಳಿಸಿದ ಮೊದಲ ಚಿನ್ನದ ಪದಕ ಇದಾಗಿದೆ.
ತೀವ್ರ ಪೈಪೆÇೀಟಿಯಿದ ಫೈನಲ್ನಲ್ಲಿ ನೀರಜ್ 86.47 ಮೀಟರ್ ದೂರಕ್ಕೆ ಭರ್ಜಿಯನ್ನು ನಿಖರವಾಗಿ ಎಸೆದು ಬಂಗಾರಕ್ಕೆ ಕೊರಳೊಡ್ಡಿದರು. 58 ವರ್ಷಗಳ ಹಿಂದೆ ಭಾರತದ ಅಥ್ಲೀಟ್ ದಂತಕಥೆ ಮಿಲ್ಕಾ ಸಿಂಗ್ ಈ ಸಾಧನೆ ಮಾಡಿದ್ದರು. ನೀರಜ್ ಸಾಧನೆ ಭಾರತಕ್ಕೆ ದೊಡ್ಡ ಹೆಮ್ಮೆಯ ಸಂಗತಿಯಾಗಿದೆ.
20 ವರ್ಷಗಳ ಜ್ಯೂನಿಯರ್ ವಿಶ್ವ ಚಾಂಪಿಯನ್ ನೀರಜ್ ನಿನ್ನೆ ಪ್ರಥಮ ಎಸೆತದಲ್ಲೇ ಫೈನಲ್ಗೆ ಅರ್ಹತೆ ಪಡೆದು ಪದಕ ಗೆಲುವಿನ ವಿಶ್ವಾಸ ಮೂಡಿಸಿದ್ದರು.
ಕಳೆದ ತಿಂಗಳು ಪಟಿಯಾಲದಲ್ಲಿ ನಡೆದ ಫೆಡರೇಷನ್ ಕಪ್ ನ್ಯಾಷನಲ್ ಚಾಂಪಿಯನ್ಶಿಪ್ ಕ್ರೀಡಾಕೂಡದಲ್ಲಿ ನೀರಜ್ 85.94 ಮೀ. ದೂರಕ್ಕೆ ಜಾವೆಲಿನ್ ಎಸೆದು ಸಿಡಬ್ಲ್ಯುಜಿನಲ್ಲಿ ಪದಕ ಜಯದ ಭರವಸೆ ಹೊಂದಿದ್ದರು.