ನ್ಯಾಯವಾದಿಗಳು ವೃತ್ತಿಯಲ್ಲಿ ಮಾನವೀಯತೆಯ ತತ್ವಗಳನ್ನು ಆಳವಡಿಸಿಕೊಳ್ಳಬೇಕು: ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗಡೆ ಕರೆ

ಬೆಂಗಳೂರು, ಏ.14-ನ್ಯಾಯವಾದಿಗಳು ತಮ್ಮ ವೃತ್ತಿಯಲ್ಲಿ ಮಾನವೀಯತೆಯ ತತ್ವಗಳನ್ನು ಆಳವಡಿಸಿಕೊಳ್ಳಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗಡೆ ಕರೆ ನೀಡಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಕಾನೂನು ವಿದ್ಯಾಸಂಸ್ಥೆ ಐದು ವರ್ಷದ ಬಿಎ ಎಲ್.ಎಲ್.ಬಿ, ಬಿಬಿಎ ಎಲ್.ಎಲ್.ಬಿ ಮತ್ತು ಮೂರು ವರ್ಷದ ಕಾನೂನು ವ್ಯಾಸಂಗವನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ನ್ಯಾಯವಾದಿಗಳು ಸಮಾಜದಿಂದ ಪಡೆದುಕೊಂಡ ಆವಕಾಶಗಳನ್ನು ಉಪಯೋಗಿಸಿಕೊಂಡು ಸದೃಢ ಸಮಾಜವನ್ನು ನಿರ್ಮಾಣಮಾಡಬೇಕೆಂದು ಹೇಳಿದರು.

ಕೆಎಲ್‍ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜೆ.ಎಂ.ಮಲ್ಲಿಕಾರ್ಜುನಯ್ಯ, 175 ಮಂದಿ ಯುವ ನ್ಯಾಯವಾದಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಪದವಿ ಪ್ರಮಾಣ ಪತ್ರ ವಿತರಣಾನಂತರ ಹಳೆಯ ವಿದ್ಯಾರ್ಥಿಗಳ ಸಂಘ ತಮ್ಮ ವಾರ್ಷಿಕ ಸಭೆ ನಡೆಸಲಾಯಿತು.
ಸುರಾನಾದ ಶೈಕ್ಷಣಿಕ ಮುಖ್ಯಸ್ಥರಾದ ಡಾ.ಎಸ್. ರವಿಚಂದ್ರನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ