ಫೇಸ್‍ಬುಕ್‍ನಲ್ಲಿ ಒಕ್ಕಲಿಗ ಜನಾಂಗದ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ :

ಹುಣಸೂರು, ಏ.13-ಫೇಸ್‍ಬುಕ್‍ನಲ್ಲಿ ಒಕ್ಕಲಿಗ ಜನಾಂಗದ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ್ದ ಆರೋಪಿಯೊಬ್ಬನನ್ನು ನಗರ ಠಾಣೆ ಪೆÇಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರಕ್ಕೆ ಸಮೀಪದ ಚಿಕ್ಕಹುಣಸೂರು ಹಳೆಯೂರು ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ವಸಂತಕುಮಾರ್‍ಗೌಡ(ವಸಂತ) ಬಂದಿತ ಆರೋಪಿ. ಪ್ರಚೋದನೆ ಆರೋಪದ ಮೇಲೆ ಎಚ್.ಪಿ.ಅಮರ್‍ನಾಥ್ ಹಾಗೂ ಸುನಿಲ್ ವಿರುದ್ಧ ದೂರು ದಾಖಲಾಗಿದೆ.

ಈತ ಏ.12ರಂದು ತನ್ನ ಫೇಸ್‍ಬುಕ್ ಖಾತೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಕ್ಕಲಿಗ ಜನಾಂಗವು ಜೆಡಿಎಸ್ ಅಭ್ಯರ್ಥಿ ವಿಶ್ವನಾಥ್‍ರಿಗೆ ಮತ ನೀಡುವ ಸಂಬಂಧ ಅವಹೇಳನಾಕಾರಿ ಪೋಸ್ಟ್ ಮಾಡಿದ್ದನ್ನು ಗಮನಿಸಿದ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗಣೇಶ್‍ಗೌಡ ಮತ್ತಿತರರು ಚುನಾವಣಾಧಿಕಾರಿ ಕೆ.ನಿತೀಶ್‍ರಿಗೆ ದೂರು ಸಲ್ಲಿಸಿದ್ದರು.

ಅವಹೇಳನಾಕಾರಿಯಾಗಿ ಪೆÇೀಸ್ಟ್ ಮಾಡಿದ್ದ ವಸಂತಕುಮಾರ್‍ಗೌಡ ಹಾಗೂ ಇವರಿಗೆ ಪ್ರಚೋದನೆ ನೀಡಿರುವ ಇವರ ಷಡಕ ಸುನಿಲ್ ಹಾಗೂ ಶಾಸಕರ ಸಹೋದರ ಎಚ್.ಪಿ.ಅಮರ್‍ನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಗರ ಠಾಣೆಗೆ ದೂರು ದಾಖಲಿಸಿರೆಂಬ ಚುನಾವಣಾಧಿಕಾರಿಯವರ ಸೂಚನೆ ಮೇರೆಗೆ ನಗರ ಠಾಣೆಯಲ್ಲಿ ರಾತ್ರಿಯೇ ಮೂವರ ವಿರುದ್ಧ ಎಸ್‍ಐ ಮಹೇಶ್ ಎಫ್‍ಐಆರ್ ದಾಖಲಿಸಿದ್ದರು. ಆರೋಪಿ ವಸಂತಕುಮಾರ್‍ಗೌಡನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ.

ಸಾಕ್ಷ್ಯ ಸಿಕ್ಕಲ್ಲಿ ಕ್ರಮ: ವಸಂತಕುಮಾರ್ ಗೌಡನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಮತ್ತಿಬ್ಬರ ವಿರುದ್ಧವೂ ದೂರು ನೀಡಿದ್ದಾರೆ.
ಇವರ ವಿರುದ್ಧ ಪ್ರಚೋದನೆ ನೀಡಿರುವ ಕುರಿತಂತೆ ಸೂಕ್ತ ದಾಖಲಾತಿ ನೀಡಿದಲ್ಲಿ ಹಾಗೂ ತನಿಖೆಯಲ್ಲಿ ಸಾಬೀತಾದಲ್ಲಿ ಮಾತ್ರ ಇವರುಗಳ ವಿರುದ್ಧ ಕ್ರಮಗಲಿದೆ ಎಂದು ವೃತ್ತ ನಿರೀಕ್ಷಕ ಗಂಗಾಧರಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ