ಕಾಮನ್ ವೆಲ್ತ್ ಕ್ರೀಡಾಕೂಟ: ಮಹಿಳೆಯರ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ತೇಜಸ್ವಿನಿ ಸಾವಂತ್ ಗೆ ಬೆಳ್ಳಿ

ಗೋಲ್ಡ್ ಕೋಸ್ಟ್: ಏ-12:ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು, ಗುರುವಾರ ಮಹಿಳೆಯರ 50ಎಂ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಬೆಲ್ಮಾಟ್ ಶೂಟಿಂಗ್ ಸೆಂಟರ್ ನಲ್ಲಿ ಇಂದು ನಡೆದ ಮಹಿಳೆಯರ 50ಎಂ ರೈಫಲ್ ಪ್ರೋನ್ ಶೂಟಿಂಗ್ ನ ಅಂತಿಮ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಸಾವಂತ್ ಒಟ್ಟು 618.9 ಅಂಕಗಳನ್ನು ಸಂಪಾದಿಸುವ ಮೂಲಕ ಎರಡನೇ ಸ್ಥಾನಕ್ಕೇರಿ ಬೆಳ್ಳಿ ಪದಕ ಗಳಿಸಿದರು.

ಕಾಮನ್ವೆಲ್ತ್ ಗೇಮ್ಸ್ 2018ರಲ್ಲಿ ಭಾರತ ಇಲ್ಲಿಯವರೆಗೂ 12 ಚಿನ್ನ, 5 ಬೆಳ್ಳಿ ಮತ್ತು 8 ಕಂಚಿನ ಪದಕ ಮೂಲಕ ಒಟ್ಟು 25 ಪದಕಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ