ನವದೆಹಲಿ:ಏ-7: ಭಾರತದಲ್ಲಿ ನಿಷೇಧವಾಗಿರುವ ಬಿಟ್ ಕಾಯಿನ್ ವ್ಯವಹಾರವನ್ನು ನಡೆಸುತ್ತಾ ಸಾವಿರಾರು ಭಾರತೀಯ ಗ್ರಾಹಕರಿಗೆ ಒಟ್ಟು 2000 ಕೋಟಿ ರೂ. ವಂಚಿಸಿರುವ ಆರೋಪದಡಿ, ಜಾರಿ ನಿರ್ದೇಶನಾಲಯ (ಇಡಿ), ಅಮಿತ್ ಭಾರದ್ವಾಜ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ಬಿಟ್ಕಾಯಿನ್ನಂಥ ವರ್ಚುವಲ್ ಅಥವಾ ಡಿಜಿಟಲ್ ಕರೆನ್ಸಿಯನ್ನು ಅಧಿಕೃತವಾಗಿ ನಿಷೇಧಗೊಳಿಸಿ ಆರ್ ಬಿಐ, ಆದೇಶ ಪ್ರಕಟಿಸಿದ ಬೆನ್ನಲ್ಲೇ, ವರ್ಚುವಲ್ ಕರೆನ್ಸಿ ವಿಚಾರಕ್ಕೆ ಸಂಬಂಧಪಟ್ಟಂತೆ ಇಡಿ ದಾಖಲಿಸಿರುವ ಮೊದಲ ಪ್ರಕರಣ ಇದಾಗಿದೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಭಾರದ್ವಾಜ್ನನ್ನು ವಶಕ್ಕೆ ಪಡೆದಿದ್ದಾರೆ. ಇದಾಗಿ ಕೆಲವೇ ಗಂಟೆಗಳಲ್ಲಿ ಜಾರಿ ನಿರ್ದೇಶನಾಲಯವು ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
Bitcoin mastermind, amit-bhardwaj-arrested, bangkok