ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮುಂದುವರದ ಭಾರತ ಕ್ರೀಡಾಪಟುಗಳ ಪದಕ ಭೇಟೆ: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಸತೀಶ್ ಕುಮಾರ್ ಶಿವಲಿಂಗಮ್

ಗೋಲ್ಡ್ ಕೋಸ್ಟ್:ಏ-7: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು, ವೇಟ್ ಲಿಫ್ಟಿಂಗ್ ನ ಪುರುಷರ 77 ಕೆಜಿ ವಿಭಾಗದಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಮ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

77 ಕೆಜಿ ತೂಕದ ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಮ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಎರಡು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 114 ಕೆಜಿ, 173ಕೆಜಿ ತೂಕ ಸೇರಿದಂತೆ ಸತೀಶ್ ಕುಮಾರ್ ಶಿವಲಿಂಗಮ್ ಒಟ್ಟು 317 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇನ್ನು ಭಾರತದ ಸತೀಶ್ ಗೆ ಇಂಗ್ಲೆಂಡ್ ನ ಜಾಕ್ ಒಲಿವರ್ ತೀವ್ರ ಪೈಪೋಟಿ ನೀಡಿದರು. ಆದರೆ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಇನ್ನು ಆಸ್ಚ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ ಒಟ್ಟು 305 ಕೆಜಿ (136 ಮತ್ತು 169 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕ ಪಡೆದರು.

ಪ್ರಸ್ತುತ ಗೋಲ್ಡ್ ಕೋಸ್ಚ್ ನಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿರುವ ಭಾರತದ ಸತೀಶ್ 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಚಿನ್ನದ ಪದಕ ಪಡೆದಿದ್ದರು. ಅಂದಿನ ಪಂದ್ಯದಲ್ಲಿ ಸತೀಶ್ ಒಟ್ಟು 328 ಕೆಜಿ (149 ಮತ್ತು 179 ಕೆಜಿ)ತೂಕ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ಗರು. ಅಂದಿನ ಅವರ ಸ್ನಾಚಿಂಗ್ ನಲ್ಲಿ ಸತೀಶ್ ಅವರ 149 ಕೆಜಿ ತೂಕ ಎತ್ತಿದ ದಾಖಲೆ ಈವರೆಗಿನ ಗರಿಷ್ಠ ತೂಕವಾಗಿ ದಾಖಲಾಗಿದೆ. ವಿಶ್ವದ ಯಾವೊಬ್ಬ ಕ್ರೀಡಾಪಟು ಕೂಡ ಈ ದಾಖಲೆಯನ್ನು ಮುರಿದಿಲ್ಲ.

Commonwealth Games 2018,Weightlifter Sathish Sivalinga, lands India’s third gold medal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ