ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂಭ್ರಮ:

ನವದೆಹಲಿ, ಏ.6-ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರ ಅಪಾರ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದ್ದಾರೆ. ಬಿಜೆಪಿಯು ನವ ಭಾರತದ ಪಕ್ಷ ಹಾಗು ತಮ್ಮ ಪಕ್ಷವು ಭಾರತದ ವೈವಿಧ್ಯತೆಯಲ್ಲಿ, ಅದರ ವಿಶಿಷ್ಟ ಸಂಸ್ಕøತಿಯಲ್ಲಿ ಹಾಗೂ 125 ಕೋಟಿ ಭಾರತೀಯರಲ್ಲಿ ಅಪಾರ ವಿಶ್ವಾಸ ಹೊಂದಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮ ಮತ್ತು ನಿಷ್ಠೆಗೆ ನಾನು ತಲೆಬಾಗುತ್ತೇನೆ. ಬಿಜೆಪಿ ಸ್ಥಾಪನಾ ದಿವಸದ ಈ ಸಂದರ್ಭದಲ್ಲಿ ಅವರ ಕಾರ್ಯವನ್ನು ನಾನು ತುಂಬು ಹೃದಯದಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ