ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುª ಪಕ್ಶಕ್ಕೆ ನಮ್ಮ ಬೆಂಬಲ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

 

ಬೆಂಗಳೂರು ,ಏ.6-ಯಾವ ರಾಜಕೀಯ ಪಕ್ಷದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ದರಾಗುತ್ತಾರೋ ಅಂತಹ ಪಕ್ಷಗಳಿಗೆ ಬ್ರಾಹ್ಮಣ ಸಮಾಜ ಬೆಂಬಲಿಸುತ್ತದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತಿಳಿಸಿದೆ.

ಮುಂಬರುವ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಎದುರಿಗೆ ಅತಿ ಕನಿಷ್ಟವಾದ ಕೆಲವು ಬೇಡಿಕೆಗಳನ್ನು ಇಡುತ್ತಿದ್ದೇವೆ. ಯಾವ ರಾಜಕೀಯ ಪಕ್ಷಗಳು ನಮ್ಮ ಬೇಡಿಕೆಗಳನ್ನು ಪೂರೈಸುವುದಕ್ಕೆ ಸಿದ್ದರಾಗುತ್ತಾರೋ ಹಾಗೂ ನಮ್ಮ ಬೇಡಿಕೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುತ್ತಾರೋ ಅಂತಹ ಪಕ್ಷಗಳನ್ನು ಬ್ರಾಹ್ಮಣ ಸಂಘ ಬೆಂಬಲಿಸುತ್ತದೆ ಎಂದು ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಕುಲಕರ್ಣಿ ತಿಳಿಸಿದರು.

ನಮ್ಮ ಬೇಡಿಕೆಗಳೆಂದರೆ ಬ್ರಾಹ್ಮಣ ವೆಲ್ಫ್‍ಫೇರ್ ಫೌಂಡೇಷನ್ ಸಂಸ್ಥೆ ನಿರ್ಮಾಣ ಮಾಡಬೇಕು, ಪುರೋಹಿತರಿಗೆ ಮಾನಧನ ನೀಡಬೇಕು, ಬ್ರಾಹ್ಮಣರ ನಿಂದನೆ ನಿಲ್ಲಿಸಬೇಕು, ಬ್ರಾಹ್ಮಣ ಸುರಕ್ಷತೆಗಾಗಿ ಅಟ್ರಾಸಿಟಿಯಂತಹ ಕಾಯ್ದೆಯನ್ನು ನಿರ್ಮಿಸಬೇಕು, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯ ಕಲಾಪಗಳಿಗೆ ಧಕ್ಕೆಯಾಗದಂತಹ ಕಾಯ್ದೆ ಜಾರಿಗೊಳಿಸಬೇಕು, ಮಠ ಮಂದಿರಗಳನ್ನು ಸರ್ಕಾರ ಅಧಿಗ್ರಹಿಸುವಂತಹ ನಿಯಮಗಳನ್ನು ಜಾರಿಗೆ ತರಬಾರದು.

ಮೇಲ್ಕಂಡ ಬೇಡಿಕೆಗಳನ್ನು ಪೂರೈಸುವುದಾಗಿ ಯಾವ ರಾಜಕೀಯ ಪಕ್ಷಗಳು ಮುಂದಾಗಿರುತ್ತವೆಯೋ ಅಂತಹ ಪಕ್ಷಗಳಿಗೆ ನಮ್ಮ ಸಂಘ ಬೆಂಬಲಿಸುತ್ತದೆ ಎಂದರು.
ಒಂದು ವೇಳೆ ನಮ್ಮ ಬೇಡಿಕೆಗಳನ್ನು ರಾಜಕೀಯ ಪಕ್ಷಗಳು ತಿರಸ್ಕರಿಸಿದ್ದೇಯಾದರೆ ನೋಟಾ ಮತ ಚಲಾಯಿಸುವುದಾಗಿ ಸಂಘ ನಿರ್ಧರಿಸಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ