ರಾಯಚೂರು,ಏ.5- ಕಟಾವು ಮಾಡಿದ್ದ ಭತ್ತವನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಸಿಂಧನೂರು ತಾಲ್ಲೂಕಿನ 7ನೇ ಮೇಲ್ ಕ್ಯಾಂಪ್ ಬಳಿ ನಡೆದಿದೆ.
ನಿನ್ನೆಯಷ್ಟೇ ಭತ್ತ ಕಟಾವು ಮಾಡಿ ನಂತರ ಅದನ್ನು ಶೇಖರಿಸಲಾಗಿತ್ತು. ಇಂದು ಮುಂಜಾನೆ ಅದನ್ನು ಮಿಲ್ಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ನಲ್ಲಿ ತುಂಬಿ ಸಾಗಿಸಲಾಗುತ್ತಿತ್ತು.’
ಮಾರ್ಗಮಧ್ಯೆ ಬೆಂಕಿ ಕಿಡಿ ಕಾಣಿಸಿಕೊಂಡು ಒಣಗಿದ್ದ ಭತ್ತಕ್ಕೆ ತಾಗಿ ಸಂಪೂರ್ಣ ಸುಟ್ಟು ಹೋಗಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ನೊಂದ ರೈತ ಪೆÇಲೀಸರಿಗೆ ದೂರು ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲಾಗಿದ್ದಾನೆ.