ವಿಧಾನಸಭಾ ಚುನಾವಣೆಯಲ್ಲಿ ಅತೀ ಭ್ರಷ್ಟ ಪಕ್ಷವನ್ನು ಅಧಿಕಾರದಿಂದ ದೂರವಿಡಿ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಕರೆ

 

ಬೆಂಗಳೂರು, ಏ.4-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತೀ ಭ್ರಷ್ಟ ಪಕ್ಷವನ್ನು ಹಾಗೂ ಮಹಾಭ್ರಷ್ಟ ಅಭ್ಯರ್ಥಿಯನ್ನು ಅಧಿಕಾರದಿಂದ ದೂರವಿಡಿ, ಜನಚಳುವಳಿಗಳ ಅಭ್ಯರ್ಥಿಗಳನ್ನು ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿ ಎಂದು ಜನಾಂದೋಲನಗಳ ಮಹಾಮೈತ್ರಿ ಸಂಘಟನೆಯ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಯಾರು ಹಿತ ಅಭ್ಯರ್ಥಿಗಳು, ಯಾರು ಕಳ್ಳ ಅಭ್ಯರ್ಥಿಗಳು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಭಾರತ ಅನೇಕ ಚುನಾವಣೆಗಳನ್ನು ಕಂಡಿದೆ. ಆದರೂ ಸಹ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿದ್ದೇವೆ ಎಂದರು.

ಕರ್ನಾಟಕವನ್ನು ಆಳಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಜನರ ಹಿತ ಕಾಯುವಲ್ಲಿ ವಿಫಲಗೊಂಡಿದೆ. ಹಾಗಾಗಿ ಇಂದು ಇಡೀ ದೇಶ ಮತ್ತು ರಾಜ್ಯ ಸಮಸ್ಯೆಗಳ ಆಗರವಾಗಿ ಪರಿವರ್ತನೆಯಾಗಿದೆ. ಕೃಷಿ ರೈತರನ್ನು ಸಾಲಗಾರರನ್ನಾಗಿ ನಗರಗಳಿಗೆ ನೂಕುದ್ದಾರೆ. ಯುವ ಪೀಳಿಗೆ ಉದ್ಯೋಗ ಭದ್ರತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದುಡಿಯಬೇಕಾಗಿದೆ ಎಂದರು.

ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ನಿರ್ಲಕ್ಷಿತ ಸಮುದಾಯಗಳ ದಮನ ಮತ್ತು ದೌರ್ಜನ್ಯಗಳಿಗೆ ಗುರಿಯಾಗುತ್ತಿರುವ ಪ್ರಮಾಣ ಹೆಚ್ಚಾಗಿದೆ. ಜನಸಾಮಾನ್ಯರ ಅಳಿವು-ಉಳಿವಿನ ಯಾವುದೊಂದು ಸಮಸ್ಯೆಗಳಿಗೂ ಯಾವ ಪಕ್ಷದ ಬಳಿಯೂ ಉತ್ತರವಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜನಸಾಮಾನ್ಯರ ಪಕ್ಷಗಳಲ್ಲ ಎಂಬುವುದನ್ನು ಬಿಡಿಸಿ ಹೇಳಲು ಬಯಸುತ್ತೇನೆ ವಿಧಿ ಇಲ್ಲದೆ ಅನೇಕ ಕ್ಷೇತ್ರಗಳು ಈ ಪಕ್ಷಗಳಿಗೆ ಮತ ಹಾಕುತ್ತಿರುವುದು ಅನಿವಾರ್ಯವಾಗಿದೆ. ಆದರೂ ಆ ಪಕ್ಷದಿಂದ ಸ್ಫರ್ಧಿಸುತ್ತಿರುವ ಅಭ್ಯರ್ಥಿಯನ್ನು ಮುಲಾಜಿಲ್ಲದೆ ಸೋಲಿಸಬೇಕೆಂದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ