ನವದೆಹಲಿ, ಏ.1-ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ 12ನೇ ತರಗತಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ದೆಹಲಿಯ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರನ್ನು ಪೆÇಲೀಸರು ಬಂಧಿಸಿದ್ದಾರೆ. ದೆಹಲಿ ಹೊರವಲಯದ ಬಾವನಾ ಪ್ರದೇಶದ ಖಾಸಗಿ ಶಾಲೆಯೊಂದರ ಶಿಕ್ಷಕರಾಗ ರಿಷಭ್ ಮತ್ತು ರೋಹಿತ್ ಹಾಗೂ ಕೋಚಿಂಗ್ ಸೆಂಟರ್ನ ತೌಖೀರ್ ಅವರನ್ನು ದೆಹಲಿ ಕ್ರೈಂ ಬ್ರಾಂಚ್ ಪೆÇಲೀಸರು ಬಂಧಿಸಿದ್ದಾರೆ. ಪರೀಕ್ಷೆ ನಡೆಯುವುದಕ್ಕೆ ಅರ್ಧ ತಾಸಿಗೆ ಮುನ್ನ ತೌಖೀರ್ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅದನ್ನು ವಾಟ್ಸಾಪ್ ಮೂಲಕ ಈ ಇಬ್ಬರು ಶಿಕ್ಷಕರಿಗೆ ರವಾನಿಸಿದ್ದ. ಈ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಹಗರಣದಲ್ಲಿ ಮತ್ತಷ್ಟು ಮಂದಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.