1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, ಚಿನ್ನಾಭರಣ ಹಾಗೂ ಹಣವನ್ನು ವಶ

ಬೆಂಗಳೂರು, ಮಾ.31- ವೈಟ್‍ಫೀಲ್ಡ್ ವಿಭಾಗದ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ 1.69ಕೋಟಿ ರೂ.ಗೂ ಹೆಚ್ಚು ಮೌಲ್ಯದ ದ್ವಿಚಕ್ರವಾಹನಗಳು, ನಾಲ್ಕು ಚಕ್ರದ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್, ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮಾರತ್‍ಹಳ್ಳಿ ಉಪವಿಭಾಗ:
ಮಾರತ್‍ಹಳ್ಳಿ ಉಪವಿಭಾಗಕ್ಕೆ ಸೇರಿದ ಮಾರತ್‍ಹಳ್ಳಿ, ಬೆಳ್ಳಂದೂರು, ಎಚ್‍ಎಎಲ್ ಹಾಗೂ ವರ್ತೂರು ಪೆÇಲೀಸ್ ಠಾಣೆಗಳ 22 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿ 49 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲಸೂರಿನ ನಿತೀನ್‍ಗಣೇಶ್ (24), ಹೊಸಕೋಟೆಯ ಮಹೇಶ್(23), ಹೊಸೂರಿನ ಸುಬ್ರಹ್ಮಣ್ಯಚಾರಿ(29), ವಿವೇಕನಗರದ ಲೋಕಮಿತ್ರನ್(19), ಜುನ್ನಸಂದ್ರದ ದಿಲೀಪ್‍ಬಾಬು ಅಲಿಯಾಸ್ ಥಾಮಸ್ (18), ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾರ್ತಿಕ್‍ಕುಮಾರ್ (34) , ಬೆಂಗಳೂರಿನ ಸುರೇಶ್ (26) ಬಂಧಿತ ಆರೋಪಿಗಳು.
ವೈಟ್‍ಫೀಲ್ಡ್ ಉಪವಿಭಾಗ:
ವೈಟ್‍ಫೀಲ್ಡ್ ಉಪವಿಭಾಗಕ್ಕೆ ಸೇರಿದ ಕಾಡುಗೋಡಿ, ಕೆ.ಆರ್.ಪುರಂ, ಮಹದೇವಪುರ ಹಾಗೂ ವೈಟ್‍ಫೀಲ್ಡ್ ಪೆÇಲೀಸ್ ಠಾಣೆ ಪೆÇಲೀಸರು 16 ಆರೋಪಿಗಳನ್ನು ದಸ್ತಗಿರಿ ಮಾಡಿ 91 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಣಸವಾಡಿಯ ಮುತ್ತು(22), ದೇವನಹಳ್ಳಿಯ ಬೂದಿಗೆರೆ ನಿವಾಸಿ ವಿಶ್ವಾಸ್ ಅಲಿಯಾಸ್ ವಿಶು(20), ಕೋಲಾರದ ಮಾಲೂರಿನ ಕಿರಣ್‍ಕುಮಾರ್ ಅಲಿಯಾಸ್ ಕಿರಣ್ (20), ಹೊಸಕೋಟೆಯ ಮೊಹಮ್ಮದ್ ಸುಹೇಲ್ (19), ಸಚಿನ್ (23), ನಗರದ ಅಶೋಕ್ ಅಲಿಯಾಸ್ ಬಿಕ್ಲಾ(19), ಕೆ.ಆರ್.ಪುರಂನ ಅರುಣ್‍ಕುಮಾರ್(20), ತಮಿಳುನಾಡಿನ ವೇಲೂರಿನ ಕದಿರುವೇಲ್ ಕೆ. (42), ಆನೇಕಲ್‍ನ ವಿಜಯಕುಮಾರ್ (39), ಮುಳಬಾಗಿಲಿನ ಪ್ರತಾಪ್(27), ರಮೇಶ್(33), ವರ್ತೂರಿನ ಮೋಹನ್‍ಕುಮಾರ್ (19), ತೌಶಿಪ್(19), ಬಂಗಾರಪೇಟೆಯ ಮಹೇಶಾಚಾರಿ(34), ವೇಣುಗೋಪಾಲರೆಡ್ಡಿ (26) ಹಾಗೂ ವಿಷ್ಣುಕುಮಾರ್ (26) ಬಂಧಿತ ಆರೋಪಿಗಳು.
ಇದಲ್ಲದೆ 11 ಪ್ರತ್ಯೇಕ ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಿ 733.4 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಗಾರಪೇಟೆಯ ಶ್ರೀನಿವಾಸ ಅಲಿಯಾಸ್ ಬಂಗಾರಪೇಟೆ ಸೀನ(46), ಮಾಲೂರಿನ ಪ್ರಕಾಶ್ ಅಲಿಯಾಸ್ ಗುಂಡ(46), ಕೆಂಗೇರಿಯ ಖಾಜಾಮೊಯಿದ್ದೀನ್(28), ಡಿ.ಜೆ.ಹಳ್ಳಿಯ ನವಾಜ್‍ಶರೀಫ್(52), ಭದ್ರಾವತಿಯ ಸಾವಿತ್ರಿ ಅಲಿಯಾಸ್ ಬಾಬಾ (23)ಹಾಗೂ ಭಾನುಮತಿ (50) ಬಂಧಿತ ಆರೋಪಿಗಳು.
ಎರಡು ಸರಗಳ್ಳತನ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ದಸ್ತಗಿರಿ ಮಾಡಿ 140 ಗ್ರಾಂ ಚಿನ್ನಾಭರಣಗಳು ಹಾಗೂ 23 ಮೊಬೈಲ್‍ಗಳನ್ನು ವಶಡಿಸಿಕೊಳ್ಳಲಾಗಿದೆ.
ಕೆ.ಆರ್.ಪುರಂನ ಅನುಷ್‍ಕುಮಾರ್(20), ಯಮಲೂರಿನ ಸಯ್ಯದ್ ಸಮೀವುಲ್ಲಾ(24), ಮುಳಬಾಗಿಲಿನ ಶೇಖ್ ಶಿರಾಜ್‍ಫಾಷ (26) ಬಂಧಿತರು.
ಮತ್ತೆ ಆರು ಪ್ರಕರಣಗಳಲ್ಲಿ ಐದು ಆರೋಪಿಗಳನ್ನು ದಸ್ತಗಿರಿ ಮಾಡಿ 238.610 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಕೊಳ್ಳಲಾಗಿದೆ.
ಮುನ್ನೆಕೋಳಾಲ ಸೀತಾಮೈತಿ (31), ಎಚ್‍ಎಎಲ್‍ನ ಜಾನ್(42), ಎಲ್‍ಬಿಎಸ್ ನಗರದ ಮೋಹನ ಅಲಿಯಾಸ್ ಪಾಚು(23), ರಮೇಶ್‍ನಗರದ ಮಾದೇಶ ಅಲಿಯಾಸ್ ಮೆಲ್ವಿನ್(25), ಹೊಸಕೋಟೆಯ ಆನಂದ್ (30) ಬಂಧಿತರು.
ಹಾಗೆಯೇ ಇನ್ನೂ 7 ಪ್ರತ್ಯೇಕ ಪ್ರಕರಣಗಳಲ್ಲಿ 10 ಆರೋಪಿಗಳನ್ನು ಬಂಧಿಸಿ 27 ಮೊಬೈಲ್, ಎರಡು ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದೆ.
ಎಚ್‍ಎಎಲ್‍ನ ಅಕ್ಬರ್(31), ದೊಡ್ಡನೆಕ್ಕಿಂದಿಯ ಮುರಳಿ (42), ಈಜಿಪುರದ ಶಂಕರ್‍ಜಾನ್ ಅಲಿಯಾಸ್ ಶಂಕರ (24), ದೊಡ್ಡಕನ್ನಲಿಯ ಅಜಯ್‍ಕುಮಾರ್(24), ಜುನ್ನಸಂದ್ರದ ದಿಲೀಪ್‍ಬಾಬು ಅಲಿಯಾಸ್ ಥಾಮಸ್(18), ಕಾಡುಬಿಸನಹಳ್ಳಿಯ ರಾಮಚಂದ್ರ ಅಲಿಯಾಸ್ ರಾಮು(19), ಅತ್ತಿಬೆಲೆಯ ಸಲ್ಮಾನ್ ಅಲಿಯಾಸ್ ಸಲ್ಲು(27), ಮಾರತ್‍ಹಳ್ಳಿ ಪವನ್(19), ಷಹಬಾಸ್ ಅಲಿಯಾಸ್ ಆನಂದ್(25), ಕಾಡುಗೋಡಿಯ ಸತೀಶ್(26) ಬಂಧಿತರು.
ಸರಗಳ್ಳ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ 25.110 ಗ್ರಾಂ ಚಿನ್ನದ ಚೈನನ್ನು ವಶಪಡಿಸಿಕೊಳ್ಳಲಾಗಿದೆ. ಆನೇಕಲ್‍ನ ರವಿಕಿರಣ್ ಅಲಿಯಾಸ್ ಕಿರಣ(22) ಬಂಧಿತ ಆರೋಪಿ.
ಮಾರತ್‍ಹಳ್ಳಿ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ 92,39,500 ರೂ. ಮೌಲ್ಯದ ವಸ್ತುಗಳು, ವೈಟ್‍ಫೀಲ್ಡ್ ಉಪ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ 77,38,200 ರೂ. ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು 1,69,77,700 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ವೈಟ್‍ಫೀಲ್ಟ್ ವಿಭಾಗದ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
ಐಸಿಐಸಿಐ ಬ್ಯಾಂಕ್‍ಗೆ ಸೇರಿದ 52 ಲಕ್ಷ ರೂ.ಗಳನ್ನು ಎಟಿಎಂಗೆ ಹಾಕದೆ ಕದ್ದೊಯ್ದಿದ್ದ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿ ಸಂಸ್ಥೆಗೆ ಸೇರಿದ ನೌಕರ ಪರಮೇಶ್ ಕೆ.ಕೆ (22) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಮಾರತ್‍ಹಳ್ಳಿ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಆರೋಪಿಯು ತನ್ನ ಮನೆಯ ಎದುರಿನ ದನದ ಕೊಟ್ಟಿಗೆಯ ಅಟ್ಟದಲ್ಲಿ ಬಚ್ಚಿಟ್ಟಿದ್ದ 51.50 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ