ಎಂಜಿನ್‍ನಲ್ಲಿ ದೋಷ, ವಿಮಾನ ತುರ್ತು ಭೂಸ್ಪರ್ಶ:

ಅಹಮದಾಬಾದ್, ಮಾ.31-ಗಗನದಲ್ಲೇ ವಿಮಾನಗಳ ಎಂಜಿನ್‍ಗಳು ಕೈಕೊಡುತ್ತಿರುವ ಅಪಾಯಕಾರಿ ಸನ್ನಿವೇಶ ಮತ್ತೆ ಮರುಕಳಿಸಿದೆ. ಅಹಮದಾಬಾದ್‍ನಿಂದ
ದೆಹಲಿಗೆ ತೆರಳುತ್ತಿದ್ದ ವಿಸ್ತಾರ ಸಂಸ್ಥೆಯ ವಿಮಾನದ ಎಂಜಿನ್‍ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ರಾತ್ರಿ
ನಡೆದಿದೆ. ಅಹಮದಾಬಾದ್‍ನಿಂದ ನಿನ್ನೆ ರಾತ್ರಿ 8.40ರಲ್ಲಿ ಮೇಲೇರಿದ ವಿಸ್ತಾರ ಯುಕೆ-99 ವಿಮಾನವು 1,000 ಮೀಟರ್ ಎತ್ತರದಲ್ಲಿ ಹಾರುತ್ತಿದ್ಧಾಗ ಬಲಭಾಗದ ಎಂಜಿನ್‍ನಲ್ಲಿ ದೋಷ ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತ ಪೈಲೆಟ್‍ಗಳು ಕೂಡಲೇ ವಿಮಾನವನ್ನು ತಿರುಗಿಸಿ 8.56ರಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದರು. ವಿಚಾರಣೆಗ ಒಳಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ