
ಬೆಂಗಳೂರು, ಮಾ.30- ಬನಶಂಕರಿ ಮಹಿಳಾ ಸಮಾಜ ವತಿಯಿಂದ 44ನೇ ವರ್ಷದ ಅದ್ಧೂರಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಶ್ರೀ ರಾಮಾಯಣ ಮ್ಯೂಜಿಕಲ್ ಬ್ಯಾಲೆ ನಾಟಕ ಪ್ರದರ್ಶನವನ್ನು ಏ.1ರಂದು ಸಂಜೆ 5ಕ್ಕೆ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಜೆಎಸ್ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಚಲನಚಿತ್ರ ನಟ ಆರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ರಾಮಾಯಣ ನಾಟಕವನ್ನು ಮೊಟ್ಟ ಮೊದಲ ಬಾರಿಗೆ ಕೇವಲ 16 ನಿಮಿಷದಲ್ಲಿ ಸಂಪೂರ್ಣವಾಗಿ ತೋರಿಸಲಾಗುವುದು. ಬನಶಂಕರಿ ಮಹಿಳಾ ಸಮಾಜದ ವತಿಯಿಂದ ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಸೇರಿ ಮಾಡುತ್ತಿರುವ ಮೊಟ್ಟ ಮೊದಲ ಪ್ರಯತ್ನವಾಗಿದೆ. ನಮ್ಮ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಪ್ರದರ್ಶನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟಿಯಾದ ತಾರಾ, ಶೃತಿ ಮತ್ತು ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.