ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ : ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್

ಹುಬ್ಬಳ್ಳಿ, ಮಾ.30- ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ರಾಜ್ಯ ಸರ್ಕಾರ ಮತದಾರರನ್ನು ಸೆಳೆಯುವ ಕುತಂತ್ರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೊಘಲಕ್ ದರ್ಬಾರ್ ನಡೆಸಿದೆ. ಎಂಎಸ್‍ಐಎಲ್ ಮೂಲಕ ಗ್ಯಾಸ್‍ಸ್ಟೌವ್‍ಗಳನ್ನು ನೀತಿ ಸಂಹಿತೆ ಇದ್ದರೂ ಖರೀದಿ ಮಾಡಲಾಗಿದೆ ಎಂದು ದೂರಿದರು.

ಕೂಡಲೇ ಚುನಾವಣಾ ಆಯೋಗ ಗೋಡೌನ್‍ಗಳ ಮೇಲೆ ದಾಳಿ ಮಾಡಿ ಗ್ಯಾಸ್‍ಸ್ಟೌವ್‍ಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು.
ರಾಯಚೂರು ವಿಶ್ವವಿದ್ಯಾನಿಲಯಕ್ಕೆ ಕಾನೂನು ಬಾಹೀರವಾಗಿ ವಿಶೇಷ ಅಧಿಕಾರಿ ನೇಮಕ ಮಾಡಲಾಗಿದೆ. ವಿಶ್ವವಿದ್ಯಾನಿಲಯ ವಿಧೇಯಕ ಇನ್ನು ಅಸ್ತಿತ್ವಕ್ಕೆ ಬಂದಿಲ್ಲ. ಆದರೂ ಪೆÇ್ರ.ಮುಜಾಫರ್ ಅಸಾದಿ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದು ಕಾನೂನು ಬಾಹೀರ ಎಂದು ಹೇಳಿದರು.
ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆಲ್ಲಲು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಚುನಾವಣೆ ಅನುಕೂಲಕ್ಕಾಗಿಯೇ ಮುಜಾಫರ್ ಅಸಾದಿಯವರನ್ನು ನೇಮಕ ಮಾಡಿದ್ದಾರೆ. ತಕ್ಷಣವೇ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ 2878 ಕೋಟಿ ರೂ.ಗಳನ್ನು ಮಾತ್ರ ಸೊಸೈಟಿಗಳಿಗೆ ನೀಡಿದೆ. ಇನ್ನು ರೈತರ ಸಾಲ ಮನ್ನಕ್ಕಾಗಿ 5282 ಕೋಟಿ ರೂ. ಬಾಕಿ ಕೊಡುವುದಿದೆ. ನುಡಿದಂತೆ ನಡೆದಿರುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದೆಲ್ಲಾ ಬೋಗಸ್. ರೈತರಿಗೆ ಸಾಲ ಸಿಗುತ್ತಿಲ್ಲ. ಹಾಗಾಗಿ ಅವರಿಗೆ ತೊಂದರೆಯಾಗಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ, ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೆÇಲೀಸ್ ಅಧಿಕಾರಿಗಳು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಠಾಣೆಗೆ ಬಂದು ಸಹಿ ಮಾಡುವಂತೆ ಸೂಚಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹಿ ಮಾಡಲು ಠಾಣೆಗೆ ಹೋಗಬಾರದು ಎಂದು ನಾನು ಕರೆ ನೀಡುತ್ತೇನೆ. ತಾಕತ್ತಿದ್ದರೆ ಬಂಧಿಸಿ ನೋಡಲಿ ಎಂದು ಸವಾಲು ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ