ಇಸ್ಲಮಾಬಾದ್, ಮಾ.29- ವಿಶ್ವದ ಅತ್ಯಂತ ಕಿರಿಯ ನೋಬಲ್ ಪ್ರಶಸ್ತಿ ಪುರಸ್ಕøತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಕ್ಷಣ ಕಾರ್ಯಕರ್ತೆ ಮಲಾಲ ಯೂಸುಫ್ ಝೈ ಇಂದು ಆರು ವರ್ಷಗಳ ಬಳಿಕ ತಮ್ಮ ತಾಯ್ನಾಡು ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರೆ. ಬಾಲಕಿಯರ ಶಿಕ್ಷಣಕ್ಕಾಗಿ ಅಭಿಯಾನದಲ್ಲಿ ತೊಡಗಿದ್ದ ಮಲಾಲ ಅವರ ಮೇಲೆ ಐದೂವರೆ ವರ್ಷಗಳ ಹಿಂದೆ ತಾಲಿಬಾನ್ ಉಗ್ರರು ತಲೆಗೆ ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಿದ್ದರು. ಇಂಗ್ಲೆಂಡ್ನ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಲಾಲ ಈಗ ಆರು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹಿಂದಿರುಗಿದರು. ಇಸ್ಲಮಾಬಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ನಂತರ ಭಾರೀ ಭದ್ರತೆಯೊಂದಿಗೆ ತೆರಳಿದ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಿದ್ ಅಬ್ಬಾಸ್ ಇವರನ್ನು ಭೇಟಿ ಮಾಡಿದರು.