ಕೇಂದ್ರ ಸರ್ಕಾರ 1 ಕೋಟಿ ಹೊಸ ಉದ್ಯೋಗ ಸೃಷ್ಟಿ!

ನವದೆಹಲಿ, ಮಾ.29- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 1 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಹೊಸ ಉದ್ಯೋಗಿಗಳಿಗೆ ಮೊದಲ ಮೂರು ವರ್ಷಗಳಿಗಾಗಿ ಮೂಲ ವೇತನದ ಶೇ.12ರಷ್ಟು ಮೊತ್ತವನ್ನು ಪಿಂಚಣಿಗೆ ನಿಗದಿಗೊಳಿಸುವ ಮೊಬಲಗು ಕ್ರೋಢೀಕರಣದ ಮೂಲಕ 1 ಕೋಟಿ ಹೊಸ ನೌಕರಿ ಸೃಷ್ಟಿಸಲು ಕೇಂದ್ರ ಸರ್ಕಾರ ಭರವಸೆ ಹೊಂದಿದೆ.
ನಿನ್ನೆ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ಯೋಜನೆಗೆ ಸಮ್ಮತಿ ನೀಡಲಾಗಿದೆ.
ಇದರೊಂದಿಗೆ ಹೊಸ ಉದ್ಯೋಗಿಗಳ ಮೊದಲ ಮೂರು ವರ್ಷಗಳ ಶೇ.12ರಷ್ಟು ಮೂಲ ವೇತನವನ್ನು ಪಿಂಚಣಿಗೆ ಮೀಸಲಿಡುವ ಜತೆಗೆ ಇದನ್ನು 1 ಕೋಟಿ ಉದ್ಯೋಗ ಸೃಷ್ಟಿಗೆ ಸಮರ್ಪಕವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಮಿತಿ ಸಭೆಯ ನಿರ್ಧಾರವನ್ನು ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್‍ಕುಮಾರ್ ಗಂಗ್ವಾರ್ ನಮ್ಮ ಸರ್ಕಾರವು ಹೊಸ ಉದ್ಯೋಗಗಳ ಸೃಷ್ಟಿಗೆ ಬದ್ಧವಾಗಿದೆ. ಈ ಯೋಜನೆಯನ್ನು 2016ರಿಂದ ಅನುಷ್ಠಾನಗೊಳಿಸಲಾಗಿದೆ.
ಪ್ರಧಾನಮಂತ್ರಿ ರೋಜ್‍ಗಾರ್ ಪೆÇ್ರೀ ಯೋಜನಾ (ಪಿಎಂಆರ್‍ಟಿವೈ) ಕಾರ್ಯಕ್ರಮದಡಿ ಈಗಾಗಲೇ 30 ಲಕ್ಷ ಕಾರ್ಮಿಕರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ