ಬಾಲಿವುಡ್ ಬೆಡಗಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್!

ಮುಂಬೈ, ಮಾ.29-ಬಾಲಿವುಡ್ ಬೆಡಗಿ ಊರ್ವಶಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಪಂಚತಾರಾ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಆಧಾರ್ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡುವಂತಾಗಿದೆ.
ಈ ಸಂಬಂಧ ಊರ್ವಶಿ ನಿನ್ನೆ ಮುಂಬೈನ್ ಬಾಂದ್ರಾ ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ. ಊರ್ವಶಿ ಮಾಹಿತಿಯನ್ನು ಹ್ಯಾಕ್ ಮಾಡಿ ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗಿದೆ. ಅಲ್ಲದೇ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ರೂಮ್‍ನನ್ನೂ ಕಾಯ್ದಿರಿಸಲಾಗಿದೆ. ಮಂಗಳವಾರ ರಾತ್ರಿ ಊರ್ವಶಿ ಪಂಚತಾರಾ ಹೋಟೆಲ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿತು. ನಿಮ್ಮ ಕೊಠಡಿ ಬುಕ್ ಆಗಿದೆ ಮೇಡಂ ಎಂದು ಸಿಬ್ಬಂದಿ ಹೇಳಿದಾಗ ನಟಿಗೆ ಆಚ್ಚರಿಯಾಯಿತು. ನಾನು ರೂಮ್ ಬುಕ್ ಮಾಡಿಲ್ಲ ಎಂದು ಊರ್ವಶಿ ಹೇಳಿದಾಗ ಆನ್‍ಲೈನ್‍ನಲ್ಲಿ ಮಾಹಿತಿ ಪರಿಶೀಲಿಸಲಿದಾಗ ಅದು ನಕಲಿ ಎಂಬುದು ಗೊತ್ತಾಯಿತು. ಹ್ಯಾಕರ್‍ಗಳು ನೀಡಿದ್ದ ದಾಖಲೆಗಳ ನಕಲಿ ಆಧಾರ್ ಕಾರ್ಡ್‍ನಲ್ಲಿ ತಮ್ಮ ಯಥಾವತ್ ಮಾಹಿತಿ ಇದ್ದುದ್ದನ್ನು ನೋಡಿ ಊರ್ವಶಿ ಅವಕ್ಕಾದರು. ಈ ಸಂಬಂಧ ದೂರು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ