ತುಮಕೂರು, ಮಾ.29-ಪೆÇಲೀಸರು ಹಾಗೂ ಚುನಾವಣಾ ಜಾಗೃತ ತಂಡ ಮಧುಗಿರಿ ತಾಲೂಕಿನ ತೋಟದ ಮನೆಯ ಮೇಲೆ ದಾಳಿ ನಡೆಸಿ 900 ಹಾಟ್ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದರೆನ್ನಲಾಗಿದ್ದ ಮಾಹಿತಿ ಆಧರಿಸಿ ರಾತ್ರಿ ದಾಳಿ ನಡೆಸಿ ಹಾಟ್ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮನೆ ಮಾಲೀಕ ಸ್ಪಷ್ಟನೆ ನೀಡಿದ್ದು, ನಮ್ಮ ಸಂಬಂಧಿಕರ ವಿವಾಹ ಸಲುವಾಗಿ ಮಡಲಕ್ಕಿ ಕಾರ್ಯಕ್ಕಾಗಿ ಹಾಟ್ಬಾಕ್ಸ್ಗಳನ್ನು ತಂದಿದ್ದು, ಇದರ ಬಿಲ್ ಕೂಡ ನಮ್ಮ ಬಳಿ ಇದೆ. ಈ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗಳಿಗೆ ಸೂಕ್ತ ದಾಖಲೆ ಒದಗಿಸುತ್ತೇನೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಪಕ್ಷವೊಂದರ ಮುಖಂಡರು ತಿಳಿಸಿದ್ದಾರೆ.
ಟೊಮಾಟೋ ಬಾತ್ ವಿತರಣೆ:
ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ಮತದಾರರಿಗೆ ಟೊಮಾಟೋ ಬಾತ್ ಹಂಚುತ್ತಿದ್ದ ಮೂವರ ವಿರುದ್ಧ ಬಡವನಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಮಾವೇಶವೊಂದರ ಹಿನ್ನೆಲೆಯಲ್ಲಿ ಮತದಾರರಿಗೆ ಟೊಮಾಟೋ ಬಾತ್ ಹಂಚಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೆÇಲೀಸರು ದಾಳಿ ನಡೆಸಿ ಪಕ್ಷವೊಂದರ ಮೂವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.