ಭಾರೀ ವಾಹನ ಹಿಂಬದಿಯಿಂದ ಟ್ರ್ಯಾಕ್ಟರ್‍ಗೆ ಡಿಕ್ಕಿ: ಚಾಲಕ ಮೃತ

ಕೋಲಾರ, ಮಾ.29- ಯಾವುದೋ ಭಾರೀ ವಾಹನ ಹಿಂಬದಿಯಿಂದ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೋಲಾರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ತಾಲ್ಲೂಕಿನ ಛತ್ರಕೋಡಿಹಳ್ಳಿ ನಿವಾಸಿ ನಂದೀಶ್(27) ಮೃತಪಟ್ಟ ಟ್ರ್ಯಾಕ್ಟರ್ ಚಾಲಕ.
ರಾಷ್ಟ್ರೀಯ ಹೆದ್ದಾರಿ 75ರ ಬಸವನತ್ತ ಗೇಟ್ ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ನಂದೀಶ್ ಹಾಗೂ ಆತನ ಸ್ನೇಹಿತ ಶ್ರೀಕಾಂತ್ ಕಂಗಾನಲ್ಲೂರು ಗ್ರಾಮದ ತೋಟವೊಂದಕ್ಕೆ ಕೆಲಸ ಮಾಡಲು ಟ್ರ್ಯಾಕ್ಟರ್‍ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಕೋಲಾರ ಸಂಚಾರಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ