ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿ: ಮೇ 12ರಂದು ಮತದಾನ 15ರಂದು ಫಲಿತಾಂಶ

ನವದೆಹಲಿ ,ªiÁ.27- ಕ£,;ರ್Áಟಕದ ಜನತೆ ಕಾತುರದಿಂದ ಎದುರು ನೋಡುತ್ತಿದ್ದ 15ನೇ ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆದು 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು , ಯಾವುದೇ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡುವಂತಹ ಆಶ್ವಾಸನೆಗಳನ್ನು ಘೋಷಣೆ ಮಾಡುವುದಾಗಲಿ ಇಲ್ಲವೇ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುವುದು ನಿಷಿದ್ಧ .

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಅಗತ್ಯವಿದ್ದರೆ ಮರು ಮತದಾನ ನಡೆದು ಮೇ 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ನವದೆಹಲಿಯಲ್ಲಿಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂಪ್ರಕಾಶ್ ರಾವತ್ ಪತ್ರಿಕಾ ಗೋಷ್ಠಿಯಲ್ಲಿ, ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಆಯೋಗ ಮುಹೂರ್ತವನ್ನು ನಿಗದಿಪಡಿಸಿರುವುದರಿಂದ ಕರ್ನಾಟಕ ಮಹಾಸಮರಕ್ಕೆ ವಿದ್ಯುಕ್ತವಾಗಿ ವೇದಿಕೆ ಸಜ್ಜಾಗಿದೆ. ಏ.17ರಂದು ಅಧಿಸೂಚನೆ ಹೊರಡಲಿದ್ದು , ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ.

ಏ.24ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಏ.25 ನಾಮಪತ್ರಗಳ ಪರಿಶೀಲನೆ ಹಾಗೂ ಏ.27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ ಎಂದು ರಾವತ್ ವಿವರಿಸಿದರು.

ಇಂದಿನಿಂದಲೇ ನೀತಿ ಸಂಹಿತೆ:
ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮತದಾರರಿಗೆ ಯಾವುದೇ ಪಕ್ಷಗಳು ಆಮಿಷವೊಡ್ಡುವಂತಹ ಭರವಸೆಗಳನ್ನು ಇಲ್ಲವೆ ಆಶ್ವಾಸನೆಗಳನ್ನು ನೀಡುವಂತಿಲ್ಲ.

ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆಯಲು ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಪರ ಜಾಹಿರಾತು ಪ್ರಕಟಿಸುವುದಾದರೆ ಆಯೋಗದ ಅನುಮತಿ ಪಡೆಯಬೇಕು.
ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವವರೆಗೂ ಯಾವುದೇ ರೀತಿಯ ಸಮೀಕ್ಷೆಗಳನ್ನು ನಡೆಸುವುದಾಗಲಿ ಇಲ್ಲವೇ ಅದನ್ನು ಪ್ರಕಟಿಸುವಂತೆಯೂ ಇಲ್ಲ.
ವೆಚ್ಚಕ್ಕೆ ಕಡಿವಾಣ:

ಚುನಾವಣೆಯಲ್ಲಿ ಹೆಚ್ಚುತ್ತಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಯೋಗ, ಓರ್ವ ಅಭ್ಯರ್ಥಿ 28 ಲಕ್ಷದವರೆಗೆ ಮಾತ್ರ ಖರ್ಚು ಮಾಡಲು ಅವಕಾಶವಿರುತ್ತದೆ.

ಬ್ಯಾನರ್, ಬಂಟಿಂಗ್ಸ್ , ಕಟೌಟ್‍ಗಳನ್ನು ಬಳಸಬೇಕಾದರೆ ಪ್ರತಿ ಅಭ್ಯರ್ಥಿಯೂ ಕಡ್ಡಾಯವಾಗಿ ಆಯೋಗದ ಅನುಮತಿಯನ್ನು ಪಡೆಯಬೇಕು.
ರಾಜ್ಯದಲ್ಲಿ ಈ ಬಾರಿ 4,96,82,356 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯಾದ್ಯಂತ ಒಟ್ಟು 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
2013ರ ಚುನಾವಣೆಗೆ ಹೋಲಿಸಿದರೆ ಮತಗಟ್ಟೆಗಳ ಸಂಖ್ಯೆಯ ಪ್ರಮಾಣ ಶೇ.10ರಷ್ಟು ಏರಿಕೆಯಾಗಿದೆ. ಈ ಬಾರಿ ವಿಶೇಷವೆಂದರೆ ದುರ್ಬಲ ವರ್ಗದ ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಒಟ್ಟು 450 ವಿಶೇಷ ಮತಗಟ್ಟೆಗಳನ್ನು ರಚಿಸಲಾಗಿದೆ. ಅಲ್ಲದೆ ದಿವ್ಯಾಂಗರಿಗೂ ಕೂಡ ವಿಶೇಷ ಸೌಲಭ್ಯವನ್ನು ನೀಡಲಾಗುವುದು.

ಪ್ಲಾಸ್ಟಿಕ್ ಬಳಕೆ ನಿಷಿದ್ಧ: ಇನ್ನು ಚುನಾವಣೆ ಪ್ರಚಾರ ಕಾರ್ಯಕ್ಕೆ ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಫ್ಲೆಕ್ಸ್‍ಗಳನ್ನು ಬಳಕೆಗೆ ಆಯೋಗ ಕಡಿವಾಣ ಹಾಕಿದೆ.
ಪರಿಸರ ಮಾಲಿನ್ಯವಾಗುವುದನ್ನು ತಡೆಗಟ್ಟಲು ನಾವು ಇಂತಹ ಕ್ರಮವನ್ನು ಕೈಗೊಂಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡಿದರೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬೇಕು, ಸಮಯ ಅವಕಾಶ ಮೀರಿದ ನಂತರ ಬಳಸಿದರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಈ ಚುನಾವಣೆಯಲ್ಲೂ ಮಾಧ್ಯಮದವರು ಆಯೋಗಕ್ಕೆ ಸ್ನೇಹಿತರಂತೆ ಕೆಲಸ ಮಾಡಬೇಕು. ಎಲ್ಲೇ ಭ್ರಷ್ಟಾಚಾರ, ಅವ್ಯವಹಾರ ಕಂಡುಬಂದರೆ ತಕ್ಷಣವೇ ಆಯೋಗದ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾಧ್ಯಮಗಳು ಹಣ ಪಡೆದು ಅಭ್ಯರ್ಥಿಯ ಪರ ಸುದ್ದಿ ಬರೆಯುವುದು ಕೂಡ ಶಿಕ್ಷಾರ್ಹ.
ಕಾನೂನು ಸುವ್ಯವಸ್ಥೆ :
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಎಲ್ಲ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಿದೆ. ಭದ್ರತೆಗಾಗಿ ಸಿಆರ್‍ಪಿಎಫ್, ಸಿಐಎಸ್‍ಎಫ್ ಹಾಗೂ ಸ್ಥಳೀಯ ಪೆÇಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು.

ಚುನಾವಣಾ ದಿನಾಂಕ ಘೋಷಣೆಯಾಗಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲಾಗಿದೆ.
ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ತೊಂದರೆಯನ್ನು ತೆಗೆದುಕೊಂಡಿದ್ದೇವೆ. ಪೆÇೀಷಕರು, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಪಪಡಿಸಿದರು.

ಒಟ್ಟು ಮತದಾರರು – 4,96,82,356
ಮಹಿಳಾ ಮತದಾರರು -2,41,35,342
ಪುರುಷ ಮತದಾರರು -2,48,65,448
ಅತಿ ದೊಡ್ಡ ವಿಧಾನಸಭಾ ಕ್ಷೇತ್ರ

ಅಧಿಸೂಚನೆ- ಏ.17
ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.24
ನಾಮಪತ್ರ ಪರಿಶೀಲನೆ- ಏ.25
ನಾಮಪತ್ರ ಹಿಂಪಡೆಯಲು ಕೊನೆ ದಿನ- ಏ.27
ಮತದಾನದ ದಿನಾಂಕ- ಮೇ 12
ಮತ ಎಣಿಕೆ- ಮೇ 15
ಮೇ 28 ಚುನಾವಣಾ ಪ್ರಕ್ರಿಯೆ ಪೂರ್ಣ

ಚುನಾವಣೆ ನಡೆಯುವ ಜಿಲ್ಲೆಗಳು
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ
ಕೋಲಾರ
ರಾಮನಗರ
ಮಂಡ್ಯ
ಮೈಸೂರು
ಚಾಮರಾಜನಗರ
ತುಮಕೂರು
ಚಿತ್ರದುರ್ಗ
ದಾವಣಗೆರೆ
ಶಿವಮೊಗ್ಗ
ಹಾಸನ
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಬೆಳಗಾವಿ
ಧಾರವಾಡ
ಹಾವೇರಿ
ಗದಗ
ಬಳ್ಳಾರಿ
ರಾಯಚೂರು
ಕೊಪ್ಪಳ
ಯಾದಗಿರಿ
ಬಾಗಲಕೋಟೆ
ವಿಜಯಪುರ
ಬೀದರ್
ಕಲಬುರಗಿ
ಮಡಿಕೇರಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ